ಬಂಟ್ವಾಳ: ಪುದು ಗ್ರಾಮಪಂಚಾಯಿತಿನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಆತಿಕಾ ಅಮ್ಮೆಮಾರ್ ಹಾಗೂ ಉಪಾಧ್ಯಕ್ಷರಾಗಿ ಮಹಮ್ಮದ್ ಹಾಶೀರ್ ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಕೇವಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಪುರಂದರ ಹೆಗ್ಡೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

BTW_OCT13_1A

ಈ ಸಂದರ್ಭ ಉಪತಹಸೀಲ್ದಾರ್ ಪರಮೇಶ್ವರ ನಾಯ್ಕ, ಪ್ರಭಾರ ಪಿಡಿಓ ದೇವಪ್ಪ ಪಿಆರ್ ಉಪಸ್ಥಿತರಿದ್ದರು. ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಸದಸ್ಯ ಆಸೀಫ್ ಇಕ್ಬಾಲ್, ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್ ಪಾವೂರು, ಎಂ.ಕೆ.ಖಾದರ್, ಅಬ್ದುಲ್ ಲತೀಫ್, ಜಮೀಲಾ, ರಮ್ಲಾನ್ ಮಾರಿಪಳ್ಳ, ಅಖ್ತರ್ ಹುಸೇನ್, ದುರ್ಗೇಶ್ ಶೆಟ್ಟಿ, ಝಾಹಿರ್ ಅಬ್ಬಾಸ್, ಲಕ್ಷ್ಮೀ, ಫೈಝಲ್ ಸಹಿತ ಪಕ್ಷ ಕಾರ್ಯಕರ್ತರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾರ ಹಾಕಿ ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
32 ಸದಸ್ಯರನ್ನು ಹೊಂದಿರುವ ಪುದು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ವೇಳೆ ಕಾಂಗ್ರೆಸ್ ಬೆಂಬಲಿತ 12 ಮಂದಿ ಸದಸ್ಯರು ಮಾತ್ರ ಹಾಜರಾಗಿದ್ದರು. ಕಾಂಗ್ರೆಸ್ ಬಂಡಾಯ 10 ಮಂದಿ ಸದಸ್ಯರು, ಬಿಜೆಪಿಯ 9 ಮಂದಿ ಸದಸ್ಯರು ಹಾಗೂ ಎಸ್ಡಿಪಿಐಯ ಒರ್ವ ಸದಸ್ಯ ಇಂದೂ ಕೂಡ ಸಭೆಯನ್ನು ಬಹಿಷ್ಕರಿಸಿದ್ದರು. ಇದು ಕಾಂಗ್ರೆಸ್ ಸದಸ್ಯರಿಗೆ ಸುಲಲಿತವಾಗಿ ಆಯ್ಕೆಗೊಳ್ಳಲು ಅವಕಾಶ ಮಾಡಿಕೊಟ್ಟಂತಾಯಿತು.

By suddi9

Leave a Reply

Your email address will not be published. Required fields are marked *