ಮೂಡುಬಿದರೆ: ಪ್ರಶಾಂತ್ ಅವರನ್ನು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿ, 5 ದಿವಸವಾದರೂ ಜಿಲ್ಲಾಡಳಿತ ಸುಮ್ಮನಿರುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯನ್ನು ಸರ್ಕಾರ ನಿಯಂತ್ರಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಶಾಂತ್ ಸಾವಿನ ತನಿಖೆ ಸರಿಯಾದ ರೀತಿಯಲ್ಲಿ ಆಗದಿದ್ದರೆ ಬಿಜೆಪಿ ಪಕ್ಷ ಸಹಿಸುವುದಿಲ್ಲ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿಷ್ಕ್ರೀಯವಾದರೆ ಜನಾಂದೋಲನದ ಮೂಲಕ ನ್ಯಾಯ ಒದಗಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
mbd_oct13_3 (1)

mbd_oct13_3 (2)
ಕೊಲೆಗೀಡಾಗಿರುವ ಪ್ರಶಾಂತ್ ನಿವಾಸಕ್ಕೆ ಮಂಗಳವಾರ ಬೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ಮುಖಂಡರಾದ ಕೆ.ಪಿ ಸುಚರಿತ ಶೆಟ್ಟಿ, ಕೆ.ಪಿ ಜಗದೀಶ್ ಅಧಿಕಾರಿ, ಬಾಹುಬಲಿ ಪ್ರಸಾದ್, ನಾಗರಾಜ ಪೂಜಾರಿ, ಸುದರ್ಶನ್.ಎಂ, ಅಜಯ್, ರಂಜಿತ್ ಪೂಜಾರಿ, ಸತೀಶ್ ಶೆಟ್ಟಿ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *