ಕಲಡ್ಕ:  ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ಇದರ ಆಶ್ರಯದಲ್ಲಿ ಕಲ್ಲಡ್ಕ ಪಂಚವಟಿ ಕಲ್ಯಾಣ ಮಂಟಪ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 161ನೇ ವರ್ಷದ ಜನ್ಮ ದಿನಾಚರಣೆ “ಗುರುಪೂಜಾ ಉತ್ಸವ” ಧಾರ್ಮಿಕ ಕಾರ್ಯಕ್ರಮವು ನೆರವೇರಿತು.

DSC_4080

ಜಾತಿಯು ಕೇವಲ ಗುರುತಿಸುವಿಕೆಗೆ ಮಾತ್ರವಾಗಿರದೇ ಸಂಘಟನೆ ಮುಖೇನ ಹತ್ತು ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಧಾರ್ಮಿಕ ಒಗ್ಗಟ್ಟು ಜಾತಿಯಿಂದ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಿದಾಗ ಮಾತ್ರ ಗುರುಪೂಜಾ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ. ಜಾತಿ, ಧರ್ಮದ ನೆಲೆಕಟ್ಟಿನಲ್ಲಿ ಸಮಾಜದ ಏಳಿಗೆ ಸಾಧ್ಯವಾಗಿದೆ. ನಾವೆಲ್ಲರೂ ಒಂದಾಗಿ ಸಂಘಟಿತರಾಗಬೇಕು, ದುಶ್ಚಟಗಳಿಂದ ಮುಕ್ತರಾಗಿ ಗುರುವರ್ಯರ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಬೇಕು, ಉತ್ತಮ ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಗುರುತಿಸುವಂತಾಗಬೇಕು. ಸಂಘಟನೆಯು ಒಂದು ಶಕ್ತಿ ಇದರಿಂದ ಬಿಲ್ಲವ ಸಮುದಾಯದ ಬೆಳವಣಿಗೆಯ ಜೊತೆಗೆ ಸಮಾಜವು ಬೆಳೆಯುತ್ತದೆ.

ನಮ್ಮಲ್ಲಿ ಸಂಘಟನಾ ಬಲವಿದ್ದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಶಿಕ್ಷಣ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳೆಲ್ಲದರಲ್ಲೂ ನಮ್ಮನ್ನು ತೊಡಗಿಸಿಕೊಳ್ಲಬೇಕು ಇವುಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ನಮ್ಮಿಂದ ಸಮಾಜಮುಖೇನ ಕೆಲಸಗಳಾದಾಗ ಅಭಿವೃದ್ಧಿ ಸಾಧ್ಯವೆಂದು ಕಾರ್ಯಕ್ರಮದ ಅಧ್ಯಕ್ಷರಾದ ಮಾಜಿ ಶಾಸಕ ಶ್ರೀ. ಎ. ರುಕ್ಮಯ ಪೂಜಾರಿಯವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ಶಾರದಾಂಬ ಭಜನಾ ಮಂಡಳಿ ಶೃಂಗಗಿರಿ ಗುಂಡಿಮಜಲು ಇವರಿಂದ ಭಜನಾ ಕಾರ್ಯಕ್ರವು ನೆರವೇರಿತು. ಶ್ರೀ. ಕೇಶವಶಾಂತಿ ನಾಟಿ ಇವರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ “ಗುರುಪೂಜೆ”ಯು ನೆರವೇರಿತು. ಬಳಿಕ ಗೋಳ್ತಮಜಲು, ಬಾಳ್ತಿಲ, ವೀರಕಂಭ, ಬೋಳಂತೂರು ಗ್ರಾಮಗಳ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಚುನಾಯಿತರಾದ ಬಿಲ್ಲವ ಸಮಾಜದ ಎಲ್ಲಾ ಸದಸ್ಯರನ್ನು ಅಭಿನಂದಿಸಲಾಯಿತು. ಹಾಗೂ ಬಿಲ್ಲವ ಸಂಘದ ಸ್ಥಾಪಕರಾದ ಹಾಗೂ ಸತತ 10 ವರ್ಷಗಳಿಂದ ಬಿಲ್ಲವ ಸಂಘವನ್ನು ಮುನ್ನಡೆಸಿ ಬೆಳೆಸಿದ ಶ್ರೀ ಏಳ್ತಿಮಾರು ರಾಮಪ್ಪ ಪೂಜಾರಿಯವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ರಾಮಪ್ಪ ಪೂಜಾರಿ, ಕಾರ್ಯದರ್ಶಿ ಬಿ. ಕರುಣಾಕರ ಪೂಜಾರಿ ಬಲ್ಕಟ್ಟ, ಉಪಾಧ್ಯಕ್ಷರಾದ ಶ್ರೀ ಮೋನಪ್ಪ ಪೂಜಾರಿ ತೆಕ್ಕಿಪಾಪು, ಗಣೇಶ್ ಅಮ್ಟೂರು, ಜತೆಕಾರ್ಯದರ್ಶಿ ಜನಾರ್ಧನ ನಾರುಕೋಡಿ, ಕೋಶಾಧಿಕಾರಿ ಶರತ್ ಕುಮಾರ್ ಅಮ್ಟೂರು, ಬಂಟ್ವಾಳ ತಾಲೂಕು ಯುವವಾಹಿನಿ ವಲಯಧ್ಯಕ್ಷರಾದ ರಾಜೇಶ್, ವೀರಕಂಭ ವಲಯದ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಪೂಜಾರಿ ವೀರಕಂಭ, ಶಿವಾನಂದ ಏಳ್ತಿಮಾರು, ಶ್ರೀ ರತ್ನಾಕರ ಪಡೀಲ್, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆಯಾದ ಶ್ರೀಮತಿ ಸುಜಾತ ರತ್ನಾಕರ ತೋಟ, ಹಾಗೂ ಕಾರ್ಯದರ್ಶಿ ಶ್ರೀಮತಿ ಸುಧಾ ಜನಾರ್ಧನ ಸುಧೆಕ್ಕಾರ್, ಗುರುಪೂಜಾ ಸಮಿತಿಯ ಸಂಚಾಲಕ ಹರೀಶ್ ಕೇಪು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್ ಕುಮಾರ್ ಬೋಳ್ತೋಡಿ ಸ್ವಾಗತಿಸಿ ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಶ್ರೀ ಮೋನಪ್ಪ ದೇವಸ್ಯರವರು ನಿರೂಪಿಸಿ ವಂದಿಸಿದರು. ಪಂಚಾಯತ್ ಸದಸ್ಯರಾದ ಶ್ರೀಯುತ ಗೋಪಾಲ ಅಮ್ಟೂರು ಹಾಗೂ ಶ್ರೀಯುತ ಮೋಹನಾ ಪಿ.ಎಸ್ ಬಾಳ್ತಿಲ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

By Suddi9

Leave a Reply

Your email address will not be published. Required fields are marked *