ಬೆಂಗಳೂರು: ರಿಷಿಕ ಸಿಂಗ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದಾಗ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಚಿತ್ರಮಂದಿ. ಬಾಬು ರಾಜೇಂದ್ರ ಸಿಂಗ್ ಅವರ ಪುತ್ರಿಯಾದ ಈ ಮಾದಕ ಚೆಲುವೆ ಹೆಚ್ಚು ತನ್ನನ್ನು ಗುರುತಿಸಿಕೊಂಡಿದ್ದು ವಿವಾದಗಳಿಂದ. ಆಕೆಯ ನಟನೆಯ ಚಿತ್ರಗಳಿಗಿಂತ ವಿವಾದ ಭರಿತ ಹೇಳಿಕೆಗಳು ಹೆಚ್ಚು ಗಮನ ಸೆಳೆಯುವಂತೆ ಮಾಡಿತ್ತು. ಆ ಬಳಿಕ ಆಕೆ ಕನ್ನಡ ಬಿಗ್ ಬಾಸ್ ನಲ್ಲಿ ಭಾಗವಹಿಸಿ ಹೆಚ್ಚು ಜನಕ್ಕೆ ಗೊತ್ತಾದಳು. ಈಗ ಆಕೆ ಸುದೀಪ್ ಅವರ ಹೊಸ ಚಿತ್ರ ಮಾಣಿಕ್ಯದಲ್ಲಿ ಐಟಂ ನಂಬರ್ ಮುಖಾಂತರ ಚಿತ್ರರಂಗದಲ್ಲಿ ಹೊಸ ಸಂಚ್ಚಲ ಉಂಟು ಮಾಡಲು ಹೊರಟಿದ್ದಾಳೆ ಈ ಚೆಲುವೆ.
rishika-singh
  ಇಷ್ಟೇ ಅಲ್ಲದೆ ಈಕೆ ಈಗ ಎರಡು  ಭಾಷೆಗಳಲ್ಲಿ  ತಯಾರಾಗುತ್ತಿರುವ ಶಾರ್ಟ್ ಫಿಲಿಮ್ಸ್  ನಿರ್ದೇಶನ ಮಾಡುತ್ತಿದ್ದಾಳೆ. ನಟನೆಯ ಮುಖಾಂತರ ಹೆಚ್ಚಿನ ಜನಪ್ರಿಯತೆ ಕಾಣದ ರಿಷಿಕ ಈಗ ನಿರ್ದೇಶನದ  ಮುಖಾಂತರ ಹೊಸ ಬದುಕು ಆರಂಭಿಸಲು ಸಿದ್ಧ ಆಗಿದ್ದಾಳೆ. ತಂದೆ ರಾಜೇಂದ್ರ ಸಿಂಗ್ ಅವರ ಹಾದಿಯಲ್ಲಿ ನಡೆದಿರುವ ರಿಷಿಕ ಯಶಸ್ವಿ ಆಗಲಿ.

By suddi9

Leave a Reply

Your email address will not be published. Required fields are marked *