ಮುಡಿಪು: ಇತ್ತಿಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಇಲ್ಲಿ ರೇಂಜರ್ಸ್,ರೋವರ್ಸ್ ಮತ್ತು ಯುವ ರೆಡ್ಕ್ರಾಸ್ ಘಟಕವನ್ನು ದೀಪ ಪ್ರಜ್ವಲಿಸುವ ಮೂಲಕ ಡಾ. ಶ್ರೀಧರ್ ಮಣಿಯಾಣಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಉದ್ಘಾಟಿಸಿದರು.

8ಬಳಿಕ ಅವರು ವಿದ್ಯಾರ್ಥಿ ಗಳಿಗೆ ಸೇವಾ ಮನೋಭಾವದ ಮೂಲಕ ಕಾರ್ಯನಿರ್ವಹಿಸಬೇಕು ಹಾಗೂ ಈ ಎರಡೂ ಘಟಕಗಳ ಆರಂಭಿಕ ಚಳುವಳಿಯ ಕುರಿತು ಕೂಲಕುಂಷವಾಗಿ ತಿಳಿಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಗಿರಿಧರ್ ರಾವ್ ಅವರು ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಮನಸ್ಸಿನಿಂದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು. ಯುವ ರೆಡ್ಕ್ರಾಸ್ ಘಟಕದ ಸಂಚಾಲಕರಾದ ಶ್ರೀ ನಂದ ಕಿಶೋರ್ರವರು ಹಾಗೂ ರೇಂಜರ್ಸ್ / ರೋವರ್ಸ್ ಘಟಕದ ಸಂಚಾಲಕರಾದ ಶ್ರೀಮತಿ ಶುಭ ಕೆ. ಹೆಚ್. ಅವರು ಘಟಕದ ವಿವಿಧ ಚಟುವಟಿಕೆಗಳ ಕುರಿತು ಹೇಳಿದರು. ಗೌತಮಿ ಮತ್ತು ಬಳಗ ಪ್ರಾರ್ಥಿಸಿದರು. ಅಬ್ದುಲ್ ನಾಸಿರ್ ಎಲ್ಲರನ್ನು ಸ್ವಾಗತಿಸಿದರು. ಕುಶಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ್ ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *