ಮೂಡುಬಿದರೆ: ಅಶ್ವತ್ಥಪುರದ ಯಕ್ಷಚೈತನ್ಯ ಸಂಸ್ಥೆಯ 11 ವಾರ್ಷಿಕೋತ್ಸವ ಅಂಗವಾಗಿ ಅಶ್ವತ್ಥಪುರ ಯುವಕ ಮಂಡಲದ ಬಯಲುರಂಗಮಂದಿರದಲ್ಲಿ ಯಕ್ಷಗಾನ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಹರಿಶ್ಚಂದ್ರ ಮಳಗೀಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಉದಯ ಕುಮಾರ್, ಅಶ್ವತ್ಥಪುರ ಯುವಕಮಂಡಲದ ಅಧ್ಯಕ್ಷ ಉಮಾನಾಥ ದೇವಾಡಿಗ, ಧಾರವಾಡ ಆಕಾಶವಾಣಿ ಕಲಾವಿದ ದಿವಾಕರ ಹೆಗಡೆ ಮುಖ್ಯ ಅತಿಥಿಯಾಗಿದ್ದರು. ಯಕ್ಷಚೈತನ್ಯದ ಪ್ರಧಾನ ಸಂಚಾಲಕ ನೆಲ್ಲಿಮಾರ್ ಸದಾಶಿವ ರಾವ್, ಗೌರವಾಧ್ಯಕ್ಷ ಪ್ರಭಾಕರ ಭಟ್, ಅಧ್ಯಕ್ಷ ಕೃಷ್ಣಮೂರ್ತಿ ಕಟೀಲು ಉಪಸ್ಥಿತರಿದ್ದರು.
mbd_oct6_6 (1)
ಸಭಾಕಾರ್ಯದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ಹಿಮ್ಮೇಳ ಕಲಾವಿದ ಗುರುಮೋಹನ ಬೈಪಾಡಿತ್ತಾಯ ಅವರಿಗೆ ಯಕ್ಷನಿಧಿ ಸಮರ್ಪಿಸಲಾಯಿತು. ವೇಣೂರಿನ ಯುವಪ್ರತಿಭೆ ಜಯಕೃಷ್ಣ ಅವರನ್ನು ಪುರಸ್ಕರಿಸಲಾಯಿತು. ಉಡುಪಿ ಯಕ್ಷಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಮಹತ್ತೋಬಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್ ಆಶೀವರ್ಚನ ನೀಡಿದರು. ಜನಾರ್ದನಶಾಸ್ತ್ರೀ ನಂದಳಿಕೆ, ಸೂರ್ಯಕಾಂತ ಮಳಗೀಕರ್ ಬೆಂಗಳೂರು, ರಘನಾಥ ಎಲ್.ವಿ ಅಶ್ವತ್ಥಪುರ , ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಮುಖ್ಯ ಅತಿಥಿಯಾಗಿದ್ದರು. ನಾಗೇಶ್ ಭಟ್, ಶಿವದತ್ತ ಪಿಜಿಗುಡೇಲು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನವಿತ್ತು. ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆಯಲ್ಲಿ ನಡೆದ ಯಕ್ಷಗಾನದಲ್ಲಿ ಡಿ.ಮನೋಹರ್ ಕುಮಾರ್ ಮಾರ್ತಾಂಡತೇಜ, ಅಂಬಾ ಪ್ರಸಾದ್ ಅವರು ಶಶಿಪ್ರಭೆ ಹಾಗೂ ನೆಲ್ಲಿಮಾರ್ ಸದಾಶಿವ ರಾವ್ ಶ್ರೀದೇವಿ ಪಾತ್ರ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *