ಗಂಡಾಂತರ ಮುಕ್ತ ಸಮಾಜಕ್ಕೆ ಯುವಶಕ್ತಿ ಒಂದಾಗಲಿ: ಮಾಧವ ಉಳ್ಳಾಲ್
ಉಳ್ಳಾಲ : ವಿಶ್ವವನ್ನೇ ಭಯೋತ್ಪಾದನೆ ಮತ್ತು ಜಾಗತಿಕ ತಾಪಮಾನಗಳೆಂಬ ಎರಡು ಗಂಡಾಂತರಗಳು ಆಳುತ್ತಿದ್ದು ಅದರಿಂದ ಮುಕ್ತರಾಗಲು ಯುವಶಕ್ತಿಗಳು ಒಂದಾಗಬೇಕೆಂದು ಪರಿಸರವಾದಿ ಮಾಧವ ಉಳ್ಳಾಲ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟಿನ ಜಗತ್ ಫ್ರೆಂಡ್ಸ್ ಸರ್ಕಲ್‍ನ ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ಆಯೋಜಿಸಲಾದ `ವೃಕ್ಷ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
vruksha Aandolana
ತಾಪಮಾನದ ಹೊಡೆತಕ್ಕೆ ಸಿಲುಕಿ ಹಚ್ಚ ಹಸುರಿನ ಪರಿಸರ ಮಾಯವಾಗುತ್ತಿದೆ. ಇಡೀ ವಿಶ್ವವೇ ಜಾಗತಿಕ ತಾಪಮಾನವೆಂಬ ಗಂಡಾಂತರ ಎದುರಿಸುತ್ತಿದ್ದು ಅದನ್ನು ಹೋಗಲಾಡಿಸಲು ಯುವಕರು ಜಾಗೃತಿ ಅಭಿಯಾನಗಳ ಮೂಲಕ ಜನರನ್ನು ಜಾಗೃತಗೊಳಿಸುವ ಕಾರ್ಯ ನಡೆಸಬೇಕಿದೆ. ಸಸಿಗಳಿಗೆ ಸದಾ ನೀರೆರೆದು ಮಕ್ಕಳಂತೆ ಘೋಷಿಸಿ ಅದನ್ನು ಗಿಡದಿಂದ ಮರವನ್ನಾಗಿಸುವ ಜವಬ್ದಾರಿ ತೆಗೆಯಬೇಕೆಂದು ಹೇಳಿದರು.
ಕಾರ್ಯಕ್ರಮ ಸಂಘಟಕ ರೋಹಿತ್ ಉಳ್ಳಾಲ್ ಮಾತನಾಡಿ ಜಗತ್ ಫ್ರೆಂಡ್ಸ್ ಸರ್ಕಲ್ ಕಳೆದ ಇಪ್ಪತ್ತೈದು ವರುಷಗಳಿಂದಲೂ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಕ್ಷೇತ್ರದ ಜನರ ಪ್ರೀತಿಗೆ ಪಾತ್ರವಾಗಿದ್ದು ಸಂಸ್ಥೆಯು ಬೆಳ್ಳಿ ಹಬ್ಬ ಆಚರಿಸುತ್ತಿರುವ ಸಂಧರ್ಭದಲ್ಲಿ ತೊಕ್ಕೊಟ್ಟು ಮೇಲ್ಸೇತುವೆಯ ಪ್ರವೇಶ ಮಾರ್ಗದ ಎರಡೂ ಇಕ್ಕೆಲಗಳಲ್ಲಿ ಸಸಿ ನೆಟ್ಟು ವೃಕ್ಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಮಂಜಪ್ಪ ಕಾರ್ನವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಳ್ಳಾಲ ನಗರಸಭಾ ಅಧ್ಯಕ್ಷೆ ಗಿರಿಜಾ ಭಾಯಿ ಎಂ., ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಸದಸ್ಯರಾದ ಶಶಿಕಲಾ ಶೆಟ್ಟಿ, ಭಾರತಿ ನಾಯ್ಕ್, ಸುಕುಮಾರ್, ಮಂಗಳೂರು ವಲಯ ಅರಣ್ಯ ರಕ್ಷಕಿ ಸೌಮ್ಯಾ, ಜಗತ್ ಫ್ರೆಂಡ್ಸ್ ಸರ್ಕಲ್‍ನ ಅಧ್ಯಕ್ಷ ಕಿಶೋರ್, ಉಪಾಧ್ಯಕ್ಷ ಅವಿನಾಶ್, ಸ್ಥಳೀಯ ಮುಖಂಡರಾದ ರಾಜೀವ್ ಮೆಂಡನ್, ವಿಠಲ ಶ್ರೀಯಾನ್ ಹಾಗೂ ದೇವದಾಸ್ ಶ್ರೀಯಾನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *