ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರುನಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಗೊಳ್ಳುತ್ತಿರುವ ನಾಲ್ಕೈತ್ತಾಯ ದೈವಸ್ಥಾನ ಮತ್ತು ಜುಮಾದಿಬಂಟ ಮಹಿಷಂದಾಯ ದೈವಸ್ಥಾನ ಮೇಲ್ಛಾವಣಿಯ ಮರದ ಕೆತ್ತನೆ ಕೆಲಸದ ಮುಹೂರ್ತ ನೆರವೇರಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಿ.ಪಂ.ಮಾಜಿ ಸದಸ್ಯ ಎ.ಸಿ.ಭಂಡಾರಿ ಸಮಿತಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್ , ನ್ಯಾಯವಾದಿ ದಿನೇಶ್ ಭಂಡಾರಿ , ಬಿ.ಕೆ.ರಾಜಾ , ಪರಮೇಶ್ವರ ಎಂ., ಗೋಪಾಲ್ ಕೃಷ್ಣ ಆಚಾರ್ಯ , ಸೂರ್ಯನಾರಾಯಣ ಭಟ್ , ಗಂಗಾಧರ ಭಂಡಾರಿ, ಮನೋಜ್ ಆಳ್ವ , ಶಿವರಾಮ ಬ್ರಾಸಿತ್ತಾಯ , ಎನ್.ಕೆ.ಶಿವ, ಪ್ರಸಾದ್ ಶೆಟ್ಟಿ, ಗಂಗು ಗಟ್ಟಿ , ಲಕ್ಷ್ಮಣ ಸಪಲ್ಯ , ಚಂದ್ರಶೇಖರ ಗಟ್ಟಿ , ಸಚ್ಚಿದಾನಂದ ಖಂಡೇರಿ, ದಾರು ಶಿಲ್ಪಿ ಮುಕುಂದ ಆಚಾರ್ಯ ಉಪಸ್ಥಿತರಿದ್ದರು.
