ಮೂಡುಬಿದರೆ: ಅ. 11ರಿಂದ 15ರವರೆಗೆ ಪುಣೆಯಲ್ಲಿ ಜರುಗಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಯೂತ್ ವೇಟ್ಲಿಪ್ಟಿಂಗ್ ಚಾಂಪಿಯನ್ಶಿಪ್ಗೆ ತಾಂತ್ರಿಕ ಅಧಿಕಾರಿಯಾಗಿ ಪ್ರಮೋದ್ ಕುಮಾರ್ ಶೆಟ್ಟಿ ನೆಲ್ಯಾಡಿ ಆಯ್ಕೆಯಾಗಿರುತ್ತಾರೆ.

ಇಂಡಿಯನ್ ವೇಟ್ಲಿಫ್ಟಿಂಗ್ ಫೆಡರೇಶನ್ನ ಆದೇಶದ ಮೇರೆಗೆ ಆಯ್ಕೆಯಾಗಿರುವ ಪ್ರಮೋದ್ ಕುಮಾರ್ ಅವರು ಮಂಗಳೂರು ದಕ್ಷಿಣ ವಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ರಾಷ್ಟ್ರೀಯ ವೇಟ್ಲಿಫ್ಟಿಂಗ್ ತರಬೇತುದಾರರೂ ಆಗಿರುತ್ತಾರೆ
