ಬಂಟ್ವಾಳ : ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ನಿರ್ವಹಿಸುತ್ತಿರುವ ಬಡ ಹಿಂದೂ ಅಮಾಯಕ ಯುವಕರನ್ನು ಗುರಿಯಾಗಿಸಿಕೊಂಡು ಕಳೆದ 4 ತಿಂಗಳಿಂದ 3 ಬಾರಿ ನಿರಂತರವಾಗಿ ಸರಣಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಹಿಂದೂ ಯುವಕರ ರಕ್ಷಣೆಗೆ ಬೇಕಾಗಿ ಅವರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಆ ಗ್ರಾಮದ ಒಬ್ಬ ನಾಗರಿಕನಾಗಿ ಅವರಿಗಾದ ಅನ್ಯಾಯದ ವಿರುದ್ಧ ನ್ಯಾಯ ಒದಗಿಸುವ ದೃಷ್ಟಿಯಿಂದ ರಸ್ತೆ ತಡೆ ಮತ್ತು ಠಾಣೆಗೆ ಮುತ್ತಿಗೆ ಹಾಕುವಂತಹ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ವತಿಯಿಂದ ನಡೆಸಲಾಯಿತೆ ಹೊರತು ಇದರಲ್ಲಿ ನನ್ನ ಸ್ವಂತ ಹಿತಾಸಕ್ತಿಯಾಗಲಿ ಅಥವಾ ರಾಜಕೀಯ ದ್ವೇಷವಾಗಲಿ ಇಲ್ಲ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಪುರುಷ ಎನ್.ಸಾಲಿಯಾನ್ ಸ್ಪಷ್ಟಪಡಿಸಿದ್ದಾರೆ.
ಈ ರೀತಿ ರಾತ್ರಿ ವೇಳೆ ಹೊಟ್ಟೆಪಾಡಿಗಾಗಿ ನಿದ್ರೆ ಬಿಟ್ಟು ಕರ್ತವ್ಯ ನಿರ್ವಹಿಸುವ ಅಮಾಯಕ ಬಡ ಹಿಂದೂ ಯುವಕರ ಮೇಲೆ ನಿರಂತರವಾಗಿ ನಡೆಯುವ ಸರಣಿ ಹಲ್ಲೆ ಪ್ರಕರಣದಿಂದ ಸುಸಂಸ್ಕೃತ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೇಸಿನ ಕೆಲ ನಾಯಕರು ಸಮಾಜ ಘಾತಕ ಶಕ್ತಿಗಳ ಮತ್ತು ಕೋಮು ಹಿನ್ನೆಲೆಯುಳ್ಳ ವ್ಯಕ್ತಿಗಳ ತಂಡವನ್ನು ಕಟ್ಟಿಕೊಂಡು ಅಮಾಯಕ ಹಿಂದೂ ಯುವಕರ ಮೇಲೆ ದಾಳಿಗಳನ್ನು ನಡೆಸಿ ನಂತರ ಅವರಿಗೆ ಪೊಲೀಸ್ ಇಲಾಖೆಯಿಂದ ರಕ್ಷಣೆಯನ್ನು ಕೊಡಿಸುತ್ತಿದ್ದಾರೆ. ಈ ಹಲ್ಲೆ ಅನಾಚಾರಗಳನ್ನು ಮರೆಮಾಚಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು, ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಟೋಲ್ಗೇಟ್ ಬಳಿ ಹಲ್ಲೆ ನಡೆಸಿದವರು ಯಾರು ಎಂಬುದು ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣವಾಗಿದೆ ಮತ್ತು ಅವರು ಯಾರ ಜೊತೆಯಲ್ಲಿ ಒಡನಾಟದಲ್ಲಿ ಇದ್ದಾರೆ ಮತ್ತು ಇದರ ಮೂಲ ಇದರ ಉದ್ದೇಶ ಏನೆಂಬುದಲ್ಲಿ ಊರಿನ ಜನ ತಿಳಿಯದಷ್ಟು ಮೂರ್ಖರಲ್ಲ ಇದನ್ನು ಆರೋಪ ಮಾಡುವವರು ತಿಳಿದಿರಲಿ. ಟೋಲ್ ಗೇಟಿನಲ್ಲಿ ಹಪ್ತಾವಸುಲಾತಿಗಾಗಿ ಪ್ರಯತ್ನಿಸಿ ಅದರಲ್ಲಿ ಯಶಸ್ವಿ ಸಿಗದಾಗ ನಿರಾಶರಾಗಿ ಟೋಲ್ ಗೇಟ್ ಬಳಿ ರಾತ್ರಿ ಹಲ್ಲೆ ನಡೆಸಿ ಭಯದ ವಾತಾವರಣವನ್ನು ಸೃಷ್ಟಿಸಿ ಟೋಲ್ ನವರಿಂದ ಹಪ್ತ ವಸೂಲು ಮಾಡುವ ಹುನ್ನಾರವೇ ಹೊರತು ಇದರಲ್ಲಿ ಬೇರೆನೂ ಸತ್ಯಾಂಶ ಇಲ್ಲ ಇದನ್ನು ಊರಿನ ಜನ ಸರಿಯಾಗಿ ಅಥರ್ೈಯಿಸಿ ಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಸುಂಕ ವಸೂಲಾತಿ ಕೇಂದ್ರವನ್ನು ತೆರೆಯಬಾರದು ಎಂದು ದೃಷ್ಟಿಯಿಂದ 2013ರಲ್ಲಿ ಬಿಜೆಪಿ ಪಕ್ಷದ ವತಿಯಿಂದ ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿ ರಾ.ಹೆ.ಪ್ರಾಧಿಕಾರದ ಗಮನ ಸೆಳೆಯಲಾಗಿತ್ತು. ಅಲ್ಲದೆ ದ.ಕ. ಜಿಲ್ಲಾಧಿಕಾರಿಯವರನ್ನು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ ಅಧಿಕಾರಿಗಳನ್ನು ಭೇಟಿ ಮಾಡಿ ಟೋಲ್ಗೇಟ್ ರದ್ದು ಪಡಿಸುವಂತೆ ಮನವಿಯನ್ನು ಆ ಸಂದರ್ಭದಲ್ಲಿ ಸಲ್ಲಿಸಿದ್ದೆವು ಅಲ್ಲದೆ ಬ್ರಹ್ಮರಕೂಟ್ಲು ಟೋಲ್ ಕೇಂದ್ರ ತೆರೆದ ಸಂದರ್ಭದಲ್ಲಿ ಪಾಣೆಮಂಗಳೂರು ಬಳಿ ಇರುವ ಹಳೆಯ ಟೋಲ್ ಗೇಟನ್ನು ರದ್ದುಪಡಿಸುವಂತೆ ಪಕ್ಷದ ವತಿಯಿಂದ ಹೋರಾಟವನ್ನು ನಡೆಸಿ ಆ ಟೋಲ್ ಕೇಂದ್ರವನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
——————————–.
