ಮೂಡುಬಿದರೆ: ಪಡುಮಾರ್ನಾಡಿನ ಬನ್ನಡ್ಕ ಪಾಡ್ಯಾರು ಮನೆಯ ಎಂ.ಕೆ. ವಿಜಯನ್ (60) ಅವರು ಕಳೆದ ಸೆ.30 ರಂದು ಮನೆಯಿಂದ ಅಂಗಡಿಗೆಂದು ಹೋದವರು ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಮೂಡುಬಿದರೆ ಠಾಣೆಯಲ್ಲಿ ದೂರು ದಾಖಲಾಗಿದೆ.
mbd_oct2_11
ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಯುರ್ವೇದ ಮದ್ದಿಗಾಗಿ ಮೂಡುಬಿದರೆ, ಮಂಗಳೂರಿಗೆ ಹೋಗುತ್ತಿದ್ದರು.
5.3 ಅಡಿ ಎತ್ತರದ ಕಪ್ಪು ಮೈಬಣ್ಣದ ವಿಜಯನ್ ಅವರು ನಾಪತ್ತೆಯಾದಂದು ಕಪ್ಪು ಪ್ಯಾಂಟ್ , ಬಿಳಿ ತುಂಬು ತೋಳಿನ ಶರ್ಟ್ ಧರಿಸಿದ್ದು ಕನ್ನಡ, ತುಳು, ಮಲೆಯಾಳಿ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕಿದವರು. ಮೂಡುಬಿದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *