ಬಂಟ್ವಾಳ : ವಿಜಯ ಬ್ಯಾಂಕ್‍ನಲ್ಲಿ 39ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ವಿಜಯ ಬ್ಯಾಂಕ್ ಅಧಿಕಾರಿ ಶಕುಂತಲಾ ಬಲ್ಲಾಳ್ ಅವರಿಗೆ ಬೀಳ್ಕೊಡುವ ಮತ್ತು ಸಮ್ಮಾನ ಕಾರ್ಯಕ್ರಮ ಸಿದ್ಧಕಟ್ಟೆ ವಿಜಯ ಬ್ಯಾಂಕ್‍ನಲ್ಲಿ ಅ.1ರಂದು ಜರಗಿತು.
0210pkt7
ಶಾಖಾ ಹಿರಿಯ ಪ್ರಬಂಧಕ ಬೇಬಿ ಕುಂದರ್ ಅವರು ಶಕುಂತಲಾ ಬಲ್ಲಾಳ್ ಅವರನ್ನು ಸಮ್ಮಾನಿಸಿ ಮಾತನಾಡಿ ಗ್ರಾಹಕರೊಂದಿಗೆ ನಗುಮೊಗದ ಸೇವೆ, ಸಹೋದ್ಯೋಗಿಗಳೊಂದಿಗೆ ಪ್ರೀತಿ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸಿದ ಶಕುಂತಲಾ ಬಲ್ಲಾಳ್ ಅವರು ಇತರರಿಗೆ ಮಾದರಿಯಾಗಿದ್ದಾರೆ. ಅವರ ನಿವೃತ್ತಿ ಬಳಿಕವೂ ಬ್ಯಾಂಕ್ ಮತ್ತು ಸಾರ್ವಜನಿಕರಿಗೆ ಸೇವೆ ಲಭಿಸುವಂತಾಗಲಿ ಎಂದು ಶುಭಹಾರೈಸಿದರು.
ಶಾಖಾ ಅ„ಕಾರಿಗಳಾದ ರಾಮಚಂದ್ರ ಭಟ್, ಸಂದೀಪ್, ಸಿಬಂದಿಗಳಾದ ಶಿವಾನಂದ ಕಾಮತ್, ತನಿಯ ಮೂಲ್ಯ, ಕೇಶವ, ಪಲ್ಲಭಾರ್ಗವ ಮತ್ತು ಗ್ರಾಹಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *