ಉಡುಪಿ: ಮೀನು ಸಾಗಿಸುವ ಲಾರಿ ನಿಂತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಯುವತಿ ಸ್ಥಳದಲ್ಲೇ ಮತಪಟ್ಟ ದಾರುಣ ಘಟನೆ ಇಲ್ಲಿಗೆ ಸಮೀಪದ ಮಾಬುಕಳದಲ್ಲಿ ಶನಿವಾರ ನಡೆದಿದೆ. ಈ ದುರ್ಘಟನೆಯಲ್ಲಿ ಬಸ್ಸಿನಲ್ಲಿದ್ದ 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಯುವತಿಯನ್ನು ಮೆರಿಟಾ ಡಿಸಿಲ್ವಾ (23) ಎಂದು ಗುರುತಿಸಲಾಗಿದ್ದು ಈಕೆ ಎಸ್ಎಮ್ಎಸ್ ಕಾಲೇಜಿನ ಉದ್ಯೋಗಿಯಾಗಿದ್ದಾರೆ.
ಬಸ್ಸು ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾಗ ಮೀನಿನ ಲಾರಿ ವೇಗವಾಗಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆದಿದೆ.





