ಬಂಡ್ವಾಳ: ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ ಇಲ್ಲಿ ಶಾಲಾ ಮಕ್ಕಳ ಹಕ್ಕುಗಳ ಕ್ಲಬ್ನ ವತಿಯಿಂದ ಗಾಂಧೀಜಯಂತಿ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಅ.2ರಂದು ಶುಕ್ರವಾರ ನಡೆಸಲಾಯಿತು.
ಉಪ ಪ್ರಾಂಶುಪಾಲರಾದ ಶ್ರೀ ರಮಾನಂದ ಗಾಂಧೀಜಯಂತಿ ಹಾಗೂ ಲಾಲ್ಬಹುದೂರ್ ಶಾಸ್ತ್ರಿಯ ಜನ್ಮದಿನದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ಧರು. ಪ್ರತಿ ದಿನ ಒಂದೊಂದು ತರಗತಿ ಮತ್ತು ಎಲ್ಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಶಾಲಾ ಪರಿಸರ ಮತ್ತು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛವಾಗಿರಿಸುವ ನಿರ್ಣಯ ಕೈಗೊಳ್ಳಲಾಯಿತು.ಶಾಲಾ ಸುತ್ತಮುತ್ತ ಪ್ಲಾಸ್ಟಿಕ್ ಮುಕ್ತ ಪ್ರದೇಶ ಮಾಡುವಂತೆ ಹಾಗೂ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಮಾಡದಂತೆ ನಿರ್ಣಯಿಸಲಾಯಿತು. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕಾರ್ಯಕ್ರಮದ ಯೋಜನೆ ಮಾಡಲಾಯಿತು. ಈ ಎಲ್ಲಾ ಕಾರ್ಯಕ್ರಮವನ್ನು ಶಿಕ್ಷಕಿಯಾದ ಶ್ರೀಮತಿ ಲವೀನಾ ಡಿಸೋಜ ನಿರ್ವಹಿಸಿದರು.
