ಬಂಟ್ವಾಳ: ಜನರ ಜೀವನವನ್ನು ಉಳಿಸುವ ಶ್ರೇಷ್ಠದಾನ ಅಂಗದಾನ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಹಣದ ಶ್ರೀಮಂತಿಕೆ ಇದ್ದರೆ ಸಾಲದು, ಹೃದಯವಂತಿಕೆ ಇರಬೇಕು. ಹೃದಯ ಶ್ರೀಮಂತಿಕೆ ಇದ್ದಾಗ ನಾವು ಬೇರೇ ರೋಗಿಗಳಿಗೆ ನಮ್ಮ ಅಂಗಾಂಗದಾನ ಮಾಡುವ ಮೂಲಕ ಹೊಸ ಜೀವನವನ್ನು ನೀಡಬಹುದು ಎಂದು ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಅಭಿಪ್ರಾಯ ಪಟ್ಟರು. ಅವರು ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಕಾಲೇಜಿನಲ್ಲಿ ನಡೆದ ಎಜೆ ಆಸ್ಪತ್ರೆ ಮಂಗಳೂರು ಇದರ -ಸಹಯೋಗದೊಂದಿಗೆ ಎನ್ ಎಸ್ ಎಸ್ ದಿನಾಚರಣೆ ಮತ್ತು ಅಂಗಾಂಗ ದಾನ ಅರಿವು ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್ ಎಸ್ ಎಸ್ ಮೂಲಕ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ತಮ್ಮ ನೆಲೆಯಲ್ಲಿ ನಾವು ಸಮಸ್ಯೆಗಳಿಗೆ ಸ್ಪಂದಿಸುವುದನ್ನು ತಿಳಿದುಕೊಳ್ಳಬಹುದು. ಪಠ್ಯೇತರ ಚಟುವಟಿಕೆಗಳಲ್ಲಿ ನಾವು ಭಾಗವಹಿಸಿದಷ್ಟೂ ಕ್ರಿಯಾಶೀಲವಾಗಿ ಬೆಳೆಯಲು ಸಾಧ್ಯ ಎಂದು ನುಡಿದರು.
NSS Organ Donation copyಸಮಾರಂಭದಲ್ಲಿ ಯೋಜನಾಧಿಕಾರಿ ಶ್ರೀ ನಾರಾಯಣ ಭಂಡಾರಿ ಎನ್ ಎಸ್ ಎಸ್ ದಿನಾಚರಣೆಯ ಮಹತ್ವ ಹಾಗೂ ಅಂಗಾಂಗದಾನ ಅರಿವು ಅಭಿಯಾನದ ಬಗ್ಗೆ ಮಾಹಿತಿಯನ್ನು ನೀಡಿದರು. ಎನ್ ಎಸ್ ಎಸ್ ವಿದ್ಯಾರ್ಥಿನಿಯರು ಅಭಿಯಾನದ ಕುರಿತು ಹಾಡುಗಳನ್ನು ಹಾಡಿದರು. ಸಂಸ್ಕ್ರತ ವಿಭಾಗದ ಮುಖ್ಯಸ್ಥ ಶ್ರೀ ರಮಾನಂದ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಎನ್ ಎಸ್À ಎಸ್ ಗೀತೆಗÀಳು ಮತ್ತು ರಾಷ್ಟ್ರೀಯ ಭಾವೈಕ್ಯತಾ ಗೀತೆಗಳನ್ನು ಹಾಡುವ ಬಗ್ಗೆ ತರಬೇತಿ ನೀಡಿದರು. ವೇದಿಕೆಯಲ್ಲಿ ಎನ್ ಎಸ್ ಎಸ್ ಘಟಕದ ನಾಯಕರಾದ ಪ್ರದೀಪ್ ಕುಮಾರ್, ನಿತಿನ್, ಶ್ಯಾಮಲಾ ಎಸ್ ಆರ್ ಉಪಸ್ಥಿತರಿದ್ದರು. ಘಟಕ ನಾಯಕಿ ಸಿಂಧೂರ ಆರ್ ಶೆಟ್ಟಿ ಸ್ವಾಗತಿಸಿ, ಯೋಜನಾಧಿಕಾರಿ ಶ್ರೀ ಕಿಟ್ಟು ರಾಮಕುಂಜ ವಂದಿಸಿದರು. ಎನ್ ಎಸ್ ಎಸ್ ಸ್ವಯಂಸೇವಕರಾದ ಶ್ರೀಕಾಂತ್ ಮತು ಪ್ರಧ್ಯುಕ್ತ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *