ದೆಹಲಿ: ಗುಜರಾತ್‍‌ನ ನರೇಂದ್ರ ಮೋದಿ ಆಡಳಿತಕ್ಕಿಂತ ನನ್ನ ಆಡಳಿತವೇ ಉತ್ತಮವಾಗಿದೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಎಐಡಿಎಂಕೆ ನಾಯಕಿ ಜಯಲಲಿತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಹಿರಿಯ ನಾಯಕ ವೆಂಕಯ್ಯ ನಾಯ್ಡು ಆ ಲೇಡಿ( ಮಹಿಳೆ) ತಮಿಳುನಾಡಿಗೆ ಅಷ್ಟೇ ಸೂಕ್ತ, ಆದರೆ ಮೋದಿ ಇಡೀ ದೇಶಕ್ಕೆ ಸೂಕ್ತ ಎಂದು ಹೇಳಿದ್ದಾರೆ.

naidu
“… ಲೇಡಿ ಲೇಡಿಯೇ, ಮೋದಿ ಮೋದಿಯೇ. ಅದರ ಬಗ್ಗೆ ಯಾವುದೇ ಸಂಶಯವಿಲ್ಲ. ಲೇಡಿ ಈ ರಾಜ್ಯಕ್ಕೆ ಸೂಕ್ತವಾಗಿದ್ದಾರೆ ಅದನ್ನು ನಾನು ಒಪ್ಪುತ್ತೇನೆ. ಆದ್ದರಿಂದ ಜನರು ಆಕೆಗೆ ಮತ ನೀಡಿದ್ದಾರೆ. ಆದರೆ ಮೋದಿ, ದೇಶದ ಆಡಳಿತಕ್ಕೆ ಸೂಕ್ತರಾಗಿದ್ದಾರೆ ” ಎಂದು ನಾಯ್ಡು ಸುದ್ದಿಗಾರರಿಗೆ ತಿಳಿಸಿದ್ದಾರೆ

ನಿನ್ನೆ ತಮ್ಮ ಪ್ರಚಾರವನ್ನು ಮುಕ್ತಾಯಗೊಳಿಸುತ್ತ ಮಾತನಾಡುತ್ತಿದ್ದ ಜಯಲಲಿತಾ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಅಪಹಾಸ್ಯ ಮಾಡುತ್ತ, “ತಮಿಳುನಾಡಿನ ಮಹಿಳೆ ಆಡಳಿತ ಗುಜರಾತ್ ಮೋದಿ ಆಡಳಿತಕ್ಕಿಂತ ಉತ್ತಮವಾಗಿದೆ” ಎಂದು  ಹೇಳಿದ್ದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾಯ್ಡು “ಒಂದು ದೇಶದ ಆಡಳಿತ ನಡೆಸುವುದು ದೊಡ್ಡ ಸವಾಲಿನ ವಿಷಯ. ಅದಕ್ಕೆ ಮೋದಿ ಹೆಚ್ಚು ಸಮರ್ಥರು. ಮ್ಯಾಡಮ್ ತಮಿಳುನಾಡಿನ ಆಡಳಿತ ನಡೆಸಲು ಸೂಕ್ತರಾಗಿದ್ದಾರೆ” ಎಂದರು.

By suddi9

Leave a Reply

Your email address will not be published. Required fields are marked *