ಬೆಂಗಳೂರು, ಏ.22: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

 

5.45: ವಾರಣಾಸಿಯಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧೆಗಿಳಿದಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಏ.23ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಮೋದಿ ಅವರು ಏ.24ರಂದು ನಾಮಪತ್ರ ಸಲ್ಲಿಸಲಿದ್ದಾರೆ. 5.10: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂಸಿಂಗ್ ಯಾದವ್ ಅವರು ಅಜಮ್ ಘರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. 4.30: ಅಮ್ಮ ಸೋನಿಯಾ ಗಾಂಧಿ ಪರ ಮಗಳು ಪ್ರಿಯಾಂಕಾ ಗಾಂಧಿ ಮತಯಾಚನೆ. ರಾಯ್ ಬರೇಲಿಯಲ್ಲಿ ಭರ್ಜರಿ ಭಾಷಣ. 10.55: ಬಿಜೆಪಿಯ ಕೆಲವು ಹಿತೈಷಿಗಳ ದ್ವೇಷ ಭಾಷಣ ನಿಜಕ್ಕೂ ದುಃಖಕರ, ಇದರಿಂದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಭಿವೃದ್ಧಿ, ಒಳ್ಳೆ ಆಡಳಿತದ ಬಗ್ಗೆ ಮಾತನಾಡಲು ಕಷ್ಟವಾಗುತ್ತಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಂದ ಟ್ವೀಟ್. 10.00: ಎಎಪಿ ನಾಯಕ ಆಶುತೋಷ್ ಅವರು ತೊಗಾಡಿಯಾ ಅವರನ್ನು ತಕ್ಷಣವೇ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ. ತೊಗಾಡಿಯಾ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ, ಆರೆಸ್ಸೆಸ್, ವಿಎಚ್ ಪಿ ಗೆ ಶೇಮ್ ಎಂದಿದ್ದಾರೆ. 9.45: ತೃಣಮೂಲ ಕಾಂಗ್ರೆಸ್ ನ ಅಸಾನ್ಸೋಲ್ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರು ವಂಚನೆ ಆರೋಪ ಎದುರಿಸುತ್ತಿದ್ದು, ಮಂಗಳವಾರ ಕೋರ್ಟಿನ ಮುಂದೆ ಶರಣಾಗತರಾಗಲಿದ್ದಾರೆ. 9.30: ಆಂಧ್ರಪ್ರದೇಶದಲ್ಲಿ ನರೇಂದ್ರ ಮೋದಿ ಅವರು ಸರಣಿ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಜತೆ ಮೋದಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

By suddi9

Leave a Reply

Your email address will not be published. Required fields are marked *