ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಶಾಲಾ ಸಂಚಾಲಕ ಜೆ.ಬಿ.ಸಿಕ್ವೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು, ಸಾಮಾಜಿಕ ಮುಂದಾಳು ಜಗದೀಶ್ ಅಧಿಕಾರಿ ಮೂಡಬಿದ್ರೆ ಮುಖ್ಯ ಅತಿಥಿಯಾಗಿದ್ದರು. ಮಖ್ಯೋಪಾಧ್ಯಾಯ ಮಹೇಶ್‍ಶೆಟ್ಟಿ ಸ್ವಾಗತಿಸಿದರು. ಸ್ವರ್ಣಲತಾ, ಐರಿನ್ ಸಾಂತುಮಯೂರ್, ಮಾನಸ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಶಾಲಾ ಸ್ಚಚ್ಛತೆ ಮತ್ತು ಸರ್ವಧರ್ಮ ಪ್ರಾರ್ಥನೆ ನಡೆಯಿತು. ನತಾಲಿಯ ಆಲಿಸ್ ವಂದಿಸಿದರು. ವರ್ನೆನ್ ಕಾರ್ಯಕ್ರಮ ನಿರೂಪಿಸಿದರು.
