ಮೂಡುಬಿದರೆ: ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ, ಮೂಡುಬಿದರೆ ವಲಯ ಐಸಿವೈಎಂ ಹಾಗೂ ಐ.ಸಿ.ವೈ.ಎಮ್. ಶಿರ್ತಾಡಿ ಘಟಕದ ಜಂಟಿ ಆಶ್ರಯದಲ್ಲಿ ಮಂಗಳೂರು ಧರ್ಮಪ್ರಾಂತ್ಯ ಯುವಜನ ಸಮ್ಮೇಳನ ಶಿರ್ತಾಡಿ ಚರ್ಚ್‍ನಲ್ಲಿ ಹಸಿರು ಹಾಗೂ ಶಾಂತಿ ಸಮಾಧಾನದ ಜಗತ್ತಿನೆಡೆಗೆ ಯುವಜನರು ಎಂಬ ಧ್ಯೇಯದೊಂದಿಗೆ ಅಕ್ಟೋಬರ್ 1ರಿಂದ 4 ರ ವರೆಗೆ ನಡೆಯಲಿದೆ ಎಂದು ಮೂಡುಬಿದರೆ ಐಸಿವೈಎಂ ಅಧ್ಯಕ್ಷ ಅನೀಶ್ ಡಿಸೋಜಾ ಹೇಳಿದ್ದಾರೆ.
ಮೂಡುಬಿದರೆ ಪ್ರೆಸ್ ಕ್ಲಬ್‍ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾಗಿರುವ ಅತೀ ವಂದನೀಯ ಡಾ.ಫ್ರಾನ್ಸಿಸ್ ಸೆರಾವೊ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದರು.
ಶಿರ್ತಾಡಿ ಸೇತುವೆ ಬಳಿಯಿಂದ ಅತಿಥಿಗಳ ಮೆರವಣಿಗೆ ನಡೆಯಲಿದೆ. ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ವಂದನೀಯ ಮೊನ್ಸಿಜೊರ್ ಡೆನಿಸ್ ಮೊರಾಸ್ ಪ್ರಭು ಅಧ್ಯಕ್ಷತೆಯಲ್ಲಿ ಅತಿಥಿಗಳಾಗಿ ಸಚಿವ ಕೆ. ಅಭಯ ಚಂದ್ರ ಜೈನ್, ಮೂಡುಬಿದರೆ ಚರ್ಚ್ ಧರ್ಮಗುರು ಆಸ್ಟಿನ್ ಪೀಟರ್ ಪೆರಿಸ್, ಐ.ಸಿ.ವೈ.ಎಮ್ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕ ರೊನಾಲ್ಡ್ ಡಿ’ಸೋಜಾ , ಮೂಡುಬಿದರೆ ವಲಯ ನಿರ್ದೇಶಕ ವಂ.ಬಾಜಿಲ್ ವಾಸ್, ಶಿರ್ತಾಡಿ ಚರ್ಚ್‍ನ ವಂ.ಫ್ರಾನ್ಸಿಸ್ ಕ್ರಾಸ್ತಾ, ಪುರಸಭಾ ಸದಸ್ಯ ಪಿ. ಕೆ. ಥೋಮಸ್, ಶಿರ್ತಾಡಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೊ, ಕಾರ್ಯದರ್ಶಿ ಮರಿಯಾ ಲೀಟಾ ಪಿರೇರಾ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಅ.3ರಂದು ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜಾ ದಿವ್ಯ ಬಲಿ ಪೂಜೆಯನ್ನು ನೇರವೇರಿಸಲಿದ್ದಾರೆ. ಮಧ್ಯಾಹ್ನ ಶಿರ್ತಾಡಿ ಸ್ವಚ್ಛ ಅಭಿಯಾನ ಉರಗ ಪ್ರಾತ್ಯಕ್ಷಿಕೆ ನಡೆಯಲಿದೆ. ಅ.4ರಂದು ಸಮಾರೋಪ ಅತೀ ವಂ.ಆಸ್ಟಿನ್ ಪೀಟರ್ ಪೆರಿಸ್ ಅಧ್ಯಕ್ಷತೆಯಲ್ಲಿ ಜರಗಲಿದೆ. ಮಂಗಳೂರು ಶಾಸಕ ಜೆ. ಆರ್ ಲೋಬೊ ಆಳ್ವಾಸ್ ಅಧ್ಯಕ್ಷ ಡಾ.ಮೋಹನ್ ಆಳ್ವ ,ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ಎಲ್ ರೊಡ್ರಿಗಸ್ ಉದ್ಯಮಿ ಸ್ಟೀಪನ್ ಮೆಂಡಿಸ್ , ಐ.ಸಿ.ವೈ.ಎಮ್. ಕರ್ನಾಟಕ ಪ್ರಾಂತ್ಯ ನಿರ್ದೇಶಕ ಅತೀ ವಂ.ಮರಿ ಜೋಸೆಫ್ ಭಾಗವಹಿಸಲಿದ್ದಾರೆ.
ಮಂಗಳೂರು ಧರ್ಮಪ್ರಾಂತ್ಯದ 116 ಚರ್ಚ್‍ಗಳ 400 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
