ಮೂಡುಬಿದರೆ: ಅಬುಧಾಬಿ ಕನ್ನಡ ಸಂಘವು ಕಲೆ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರ ಸಾಧನೆ ಮಾಡುತ್ತಿರುವರಿಗೆ ಕೊಡಮಾಡುವ ದ.ರಾ ಬೇಂದ್ರೆ ಪುರಸ್ಕಾರಕ್ಕೆ ಲೇಖಕ ಇರ್ಶಾದ್ ಮೂಡುಬಿದರೆ ಆಯ್ಕೆಯಾಗಿದ್ದಾರೆ.
ಅನಿವಾಸಿ ಭಾರತೀಯರಾಗಿರುವ ಇರ್ಶಾದ್ ಮೂಡುಬಿದರೆ ನ.6ರಂದು ಅಬುಧಾಬಿ ಕನ್ನಡ ಸಂಘದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ. ಈ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ, ಯು.ಎ.ಇ ಭಾರತೀಯ ರಾಯಭಾರಿ ಬಿ.ಪಿ ಸೀತಾರಾಮ, ಉದ್ಯಮಿ ಬಿ.ಆರ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
