ಬಂಟ್ವಾಳ: ಕಳವು ಯತ್ನ ನಡೆಸಿದ ಆರೋಪಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬುಧವಾರ ಪಂಜಿಕಲ್ಲು ಗ್ರಾಮದ ದಡ್ಡಲಕಾಡು ಎಂಬಲ್ಲಿ ನಡೆದಿದೆ.¸
ಇಲ್ಲಿನ ಶ್ರೀ ಜಗದಾಂಬಿಕ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪದೈವ ಭಜನಾಮಂದಿರದಲ್ಲಿ ಕಳವಿಗೆ ನಾಲ್ಕು ಮಂದಿ ಕಳ್ಳರು ವಿಫಲಯತ್ನ ನಡೆಸಿದ್ದು ಈ ಪೈಕಿ ಸ್ಥಳೀಯ ಗುಡ್ಡವೊಂದರಲ್ಲಿ ಅವಿತು ಕುಳಿತಿದ್ದ ಆರೋಪಿಯನ್ನು ಸ್ಥಳೀಯರೇ ಹಿಡಿದು ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಕಳ್ಳನನ್ನು ಮಂಗಳೂರಿನ ಜೆಪ್ಪು ನಿವಾಸಿ ಇರ್ಷಾದ್ ಎಂದು ಗುರುತಿಸಲಾಗಿದೆ.


ನಡೆದಿದ್ದೇನು?
ಜಗದಾಂಬಿಕ ಭಜನಾಂಮದಿರದಲ್ಲಿ ಕಳವು ನಡೆಸಲು ನಾಲ್ಕು ಮಂದಿಯ ತಂಡ ಸಂಚು ರೂಪಿಸಿ ಮುಂಭಾಗದ ಬೀಗವನ್ನು ಮುರಿದು ಒಳ ಪ್ರವೆಶೀಸುವ ಪ್ರಯತ್ನ ನಡೆಸುತ್ತಿದ್ದಂತೆಯೇ ಮಂದಿರದ ಹಿಂಬಾಗದ ಮನೆಯ ನಿವಾಸಿ ಕೇಶವ ಎಮಬವರು ಎಚ್ಚರಗೊಂಡು ನೋಡಿದಾಗ ಇಬ್ಬರು ಕಳ್ಳರು ಬೈಕ್‍ನಲ್ಲಿ ಪರಾರಿಯಾದರು ಎನ್ನಲಾಗಿದೆ. ಮತ್ತೊರ್ವನನ್ನು ಹಿಡಿಯಲು ಪ್ರಯತ್ನ ನಡೆಸುತ್ತಿದ್ದಂತೆಯೇ ಆತನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕಳ್ಳರು ಬಂದಿರುವ ಬಗ್ಗೆ ಸುದ್ದಿ ಹರಡಿ ಸಾರ್ವಜನಿಕರು ಸ್ಥಳಕ್ಕೆ ಸ್ಥಳಕ್ಕೆ ಆಗಮಿಸಿದ್ದು ಪೊಲೀಸರಿಗೂ ಸುದ್ದಿ ಮುಟ್ಟಿಸಲಾಗಿತ್ತು. ಮುಂಜಾನೆ 3 ಗಂಟೆಯ ವೇಳೆಗೆ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದಯೇ ಒರ್ವ ಕಳ್ಳ ಭಜನಾ ಮಂದಿರದ ಆವರಣ ಗೋಡೆಯ ಬಳಿ ಅವಿತುಕೊಂಡಿದ್ದನ್ನು ಸ್ಥಳೀಯರೋರ್ವರು ಗಮನಿಸಿ ಹಿಡಿಯಲೆತ್ನಿಸಿದಾಗ ಆತ ತಪ್ಪಿಸಿಕೊಂಡು ಪಕ್ಕದ ಗುಡ್ಡವೊಂದರಲ್ಲಿ ಅವಿತುಕೊಂಡಿದ್ದ. ಗುಡ್ಡದಲ್ಲು ಕಳ್ಳನ್ನು ಹುಡುಕಿ ಸಿಗದೇ ಇದ್ದಾಗ ಪೊಲೀಸರು ವಾಪಸ್ಸಾದರೂ ಗ್ರಾಮಸ್ಥರು ತಮ್ಮ ಪ್ರಯತ್ನ ಮುಂದುವರೆಸಿದ್ದರು. ಬೆಳಿಗ್ಗೆ 10.30ರ ವೇಳೆಗೆ ಗುಡ್ಡದ ಪೊದೆಯೊಂದರಲ್ಲಿ ಅವಿತುಕುಳಿತಿದ್ದ ಕಳ್ಳನನ್ನು ಹಿಡಿದ ಗ್ರಾಮಸ್ಥರು ರಸ್ತೆ ಬದಿಯ ಸೂಚನ ಫಲಕದ ಕಂಬಕ್ಕೆ ಕಟ್ಟಿ ಹಾಕಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಈ ಸಂದರ್ಭ ಆತಂಕಗೊಂಡಿದ್ದ ಕಳ್ಳ ತಾವು ನಾಲ್ಕು ಮಂದಿ ಕಳ್ಳತನಕ್ಕೆ ಬಂದಿದ್ದು ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಗರಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ, ಭಜನಾಮಂದಿರದಲ್ಲಿಯೂ ಕಳವು ನಡೆಸಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಉಳಿದ ಮೂವರು ಮಂಗಳೂರು ಸುತ್ತಮುತ್ತಲಿನ ನಿವಾಸಿಗಳಾದ ರಫೀಕ್, ಸಾಧಿಕ್, ಪ್ರಸಾದ್ ಎಂದು ತಿಳಿಸಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಆರೋಪಿಯಲ್ಲಿದ್ದ ಎರಡು ಮೊಬೈಲ್‍ಗಳನ್ನು ಗ್ರಾಮಸ್ಥರು ವಶಕ್ಕೆ ಪಡೆದುಕೊಂಡಿದ್ದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿಯೂ ಕಳ್ಳರು ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಕಳ್ಳತನಕ್ಕೆ ವಿಫಲಯತ್ನ ನಡೆಸಿದ್ದಾರೆ. ಈ ಸಂಬಂದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಅಂಚನ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.



