ಕೈಕಂಬ: ಭಾರತ ರಾಷ್ಟ್ರದ ಕೋಣಗಳ ಲೋಕದ `ಹ್ಯಾಟ್ರಿಕ್ ಹಿರೋ’ ಪ್ರತಿಷ್ಠಿತನಾಗಿ, ಕರ್ನಾಟಕ ರಾಜ್ಯದ ಹಲವೆಡೆ ಕಂಬಳದ ಕರೆಗಳಲ್ಲಿ ಓಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯ `ಕಂಬಳ ಕರ್ಣ’ ಖ್ಯಾತಿಯ, ಓಟದ ಕೋಣವಾಗಿ ಇತಿಹಾಸ ಸೃಷ್ಠಿಸಿದ `ಶರವೇಗದ ಸರದಾರ’ ಎಂದೆಣಿಸಿ ಬಂಗಾರದ ಕಿರೀಟ ತೊಡಿಸಿ ಕೋಣಗಳ ಲೋಕದ `ಹ್ಯಾಟ್ರಿಕ್ ಹಿರೋ’ ಪ್ರತಿಷ್ಠಿತನಾಗಿ ಸನ್ಮಾನಿಸಲ್ಪಟ್ಟುಮೆರೆದ ಕಂಬಳಲೋಕದ `ಅನಭಿಷಿಕ್ತ ದೊರೆ’ ಬಿರುದಾಂಕಿತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2013 ಪುರಸ್ಕೃತ ಮೂಲ್ಕಿ ಪಯ್ಯೊಟ್ಟುವಿನ ಕಂಬಳ ಕೋಣ `ನಾಗರಾಜ’ ಮಾಲಕ ಪಯ್ಯೊಟ್ಟು ಸದಾಶಿವ ಎ.ಸಾಲ್ಯಾನ್ ನಿಧನರಾದರು. ಕಳೆದ ಒಂದು ವಾರದ ಹಿಂದೆಯಷ್ಟೇ ಅಸ್ವಸ್ಥರಾಗಿ ಮಂಗಳೂರುನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದ ಸದಾಶಿವ ಸಾಲ್ಯಾನ್ ಅವರು ಇಂದಿಲ್ಲಿ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಸುಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ (ಅ.02) ಅವರ ನಿವಾಸವಾದ ಮೂಲ್ಕಿಪಯ್ಯೊಟ್ಟುನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಗಣ್ಯರ ಸಂತಾಪ ಸಕ್ರೀಯ ಸಮಾಜ ಸೇವಕರಾಗಿದ್ದು ಇಂದಿಲ್ಲಿ ಹೃದಯಾಘಾತಕ್ಕೆ ನಿಧನರಾದ ಸದಾಶಿವ ಎ.ಸಾಲ್ಯಾನ್ ನಿಧನಕ್ಕೆ ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕ ಜಗನ್ನಾಥ್ ವಿ.ಕೋಟ್ಯಾನ್ (ಭಾವ), ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷರೂ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ ಅಸೋಸಿಯೇಶನ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್, ಯುವವಿಭಾಗದ್ಯಕ್ಷ ನಿಲೇಶ್ ಪಿ.ಪೂಜಾರಿ, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ, ಚಲನಚಿತ್ರ ನಟ, ನಿರ್ಮಾಪಕ ರಾಜಶೇಖರ ಕೋಟ್ಯಾನ್ ಮುದರಂಗಡಿ, ಉದ್ಯಮಿಗಳಾದ ಸುರೇಂದ್ರ ಪೂಜಾರಿ, ಹರೀಶ್ ಜಿ.ಅಮೀನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸದಾಶಿವ ಎ.ಸಾಲ್ಯಾನ್ ಸತತ ಐದು ದಶಕಗಳ ಕಾಲಾವಧಿಯಲ್ಲಿ ಕಂಬಳದ ಮೂಲಕ ಕ್ರೀಡೆಯೆಲ್ಲಿ ತೊಡಗಿಸಿ ತುಳುನಾಡಿನ ಜಾನಪದ ಕ್ರೀಡೆ ಕಂಬಳ ಓಟದಲ್ಲಿ ನೂರಾರು ಪುರಸ್ಕೃರಗಳನ್ನು ತಮ್ಮದಾಗಿಸಿದ ಕೀರ್ತಿ ಪಯ್ಯೊಟ್ಟು ಮನೆತನದ್ದಾಗಿಗೆ. ಅದರಲ್ಲೂ ನಿರಂತರ ಎರಡು ದಶಕಗಳ ಕಾಲಾವಧಿಯಲ್ಲಿ ಅವಿರತವಾಗಿ ಕಂಬಳದ ಕರೆಗಳಲ್ಲಿ ಓಡಿ ಕಂಬಲಾಭಿಮಾನಿಗಳಿಗೆ ಮೋಡಿ ಮಾಡಿದ ನಾಗರಾಜ ತನ್ನ 20ನೇ ವಯಸ್ಸಿನಿಂದ ಕಂಬಳದಿಂದ ನಿವೃತ್ತಿ ಹೊಂದಿತ್ತು. ಕೋಣ ಜಾತಿಯ ಪ್ರಾಣಿಯಾಗಿ ಹುಟ್ಟಿದರೂ ಬುದ್ಧಿಜೀವಿಕ್ಕಿಂತಲೂ ಹುಷಾರ್ ಎಂದೆಣಿಸಿದ ನಾಗರಾಜ ಪಯ್ಯೊಟ್ಟು ಮನೆತನದ ಮಗ ನಂತೆಯೇ ಬೆಳೆದಿದ್ದ. ಇಹಲೋಕ ತ್ಯಜಿಸುವ ಕೆಲವೊಂದು ವರ್ಷಗಳ ಹಿಂದೆ ವೃದ್ಧ್ಯಾಪದಿಂದಾಗಿ ಕೇವಲ ಹಲ್ಲುಗಳು ಉದುರಿದ್ದವು ಹೊರತು ಯಾವುದೇ ಅನಾರೋಗ್ಯಕ್ಕೆ ತುತ್ತಾಗಿರದೆಯೂ ಜೂನ್.2009ರಲ್ಲಿ ಒಮ್ಮಿಂದೊಮ್ಮೆಲೇ ತೀವ್ರ ಅಸ್ವಸ್ಥಗೊಂಡು ಸುರ್ಯೋದಯದ ಮುನ್ನವೇ ಕಾಲವಶವಾಗಿದ್ದನ್ನು ಸ್ಮರಿಸುತ್ತಿರುವ ಪಯ್ಯೊಟ್ಟು ಸಾಲ್ಯಾನ್ ಕಣ್ಣೀರ ಬಾಷ್ಪಾಂಜಲಿ ಮಿಡಿದು ಈ ಗೌರವ ನಾಗರಾಜನ ಪಾಲಿಗೆ ಸಲ್ಲುವಂತಿದೆ ಅಂದಿದ್ದರು. 1985ರಲ್ಲಿ ಜನ್ಮ ತಾಳಿ 1988ರ ನಾಗರಪಂಚಮಿ ದಿನ ಮೂಲ್ಕಿಯ ಪ್ರತಿಷ್ಠಿತ ಪಯ್ಯೊಟ್ಟು ಮನೆತನಕ್ಕೆ ಒಡೆಯನಾಗಿ ಸೇರಿದ ಈ ಕೋಣಕ್ಕೆ `ನಾಗರಾಜ’ನಾಗಿ ನಾಮಕರಣ ಮಾಡಲಾಗಿದ್ದು, ಅಂದಿನಿಂದ ಶರವೇಗದ ಓಟಕ್ಕೆ ಅಣಿಗೊಂಡು ಪಯ್ಯೊಟ್ಟು ಮನೆತನಕ್ಕೆ ಪ್ರತಿಷ್ಠೆ ತಂದಿತ್ತು. ಕಂಬಳದಲ್ಲಿ ಸುಮಾರು 500ಕ್ಕೂ ಅಧಿಕ ಭಾರಿ ಸ್ಪರ್ಧಿಸಿ 115ಕ್ಕೂ ಅಧಿಕ ಸ್ವರ್ಣ-ರಜಕ ಪದಕಗಳೊಂದಿಗೆ ಪುರಸ್ಕೃತಗೊಂಡು ಲಕ್ಷಾಂತರ ಕ್ರೀಡಾಭಿಮಾನಿಗಳ ಅಭಿಮಾನಕ್ಕೆ ಪಾತ್ರವಾದ `ನಾಗರಾಜ’ ತನ್ನ 4ನೇ ವಯಸ್ಸಿನಿಂದ ಆರಂಭಿಸಿ 20ನೇ ವಯಸ್ಸಿನ ತನಕವೂ ನಿರಂತರವಾಗಿ ಕಂಬಳ ಕ್ರೀಡೆಯಲ್ಲಿ ಪಾಲ್ಗೊಂಡು ಸ್ಪರ್ಧೆಯ ಯಜಮಾನನಾಗಿ ಕೀರ್ತಿ ಗಿಟ್ಟಿಸಿಕೊಂಡ `ನಾಗರಾಜ’ ಕೇಂದ್ರ ಸರಕಾರದ ಅಂಚೆ ಇಲಾಖೆಯು ಹೊರಡಿಸಿದ್ದ ಅಂಚೆ ಚೀಟಿಯಲ್ಲೂ ತನ್ನ ವರ್ಜಸ್ಸು ರೂಪಿಸಿ ಸ್ವಂತಿಕೆಯ ಘನತೆ ಹೊಂದಿ 25 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಖರೀದಿಗೂ ಪಾತ್ರವಾಗಿತ್ತು. ಪಯ್ಯೊಟ್ಟು ಮನೆತನದ ರಾಜಪುತ್ರನಂತೆ ಮೆರೆದ ನಾಗರಾಜ ನಾಗಲೋಟಕ್ಕೆ ಸನ್ನದ್ಧವಾಗಿ ಓಡುತ್ತಾ ತನ್ನ ಸಾಧನೆ ಮೆರೆದ ಕಾರಣ ಆತನ ಕೀರ್ತಿಯು ನಮ್ಮ ಪಾಲಿಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಾಪ್ತಿಸಿತು ಎಂದು ಇದನ್ನು ಗೋರೆಗಾಂವ್ ಪಶ್ಚಿಮದ ಲಲಿತ್ ಹೊಟೇಲ್ನ ಮಾಲಕ, ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕ ಜಗನ್ನಾಥ್ ವಿ. ಕೋಟ್ಯಾನ್ (ಮೃತರ ಭಾವ) ತಿಳಿಸಿರುವರು.

