ಕಲಾವಿದರು ಉದಾರತೆ ತೋರಬೇಕು : ಸುರೇಂದ್ರಕುಮಾರ್ ಹೆಗ್ಡೆ
ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಸ್ಥೆಯು ತನ್ನ ಎಂಟನೇ ವಾರ್ಷಿಕ ಸಭೆಯನ್ನು ಇಂದಿಲ್ಲಿ ಮಂಗಳವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಜರುಗಿಸಿತು. ನಾಡಿನ ಹಿರಿಯ ಕಲಾವಿದೆ ಮತ್ತು ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅವರು ದೀಪ ಬೆಳಗಿಸಿ ಸಭೆಗೆ ಚಾಲನೆಯನ್ನಿತ್ತರು. ಪರಿಷತ್ತುನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಸಲಾದ ಮಹಾಸಭೆಯ
ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಸಂಘದ ಸ್ಥಾಪಕಾಧ್ಯಕ್ಷ ಎಸ್.ಟಿ ವಿಜಯಕುಮಾರ್ ತಿಂಗಳಾಯ ಮತ್ತು ಹಿರಿಯ ಕಲಾವಿದರುಗಳಾದ ಡಾ| ವ್ಯಾಸರಾಯ ನಿಂಜೂರು, ಎಚ್.ಬಿ.ಎಲ್ ರಾವ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ವಿ.ಕೆ. ಸುವರ್ಣ ವೇದಿಕೆಯಲ್ಲಿ ಆಸಿನರಾಗಿದ್ದು, ದೀಪ ಪ್ರಜ್ವಲಿಸಿದರು. ಕಲಾವಿದರ ಪರಿಷತ್ತು ಜಾತ್ಯಾತೀತ ಮತ್ತು ಭಾಷಾತೀತವಾಗಿ ಸಮಾಜಮುಖಿ ಸೇವೆಯಲ್ಲಿ ಸಕ್ರೀಯಗೊಂಡಿದೆ.

Kannadiga Kalaavidara Parishad-1

Kannadiga Kalaavidara Parishad-2

Kannadiga Kalaavidara Parishad-4

Kannadiga Kalaavidara Parishad-A3

Kannadiga Kalaavidara Parishad-B1

Kannadiga Kalaavidara Parishad-B3

Kannadiga Kalaavidara Parishad-B4ಕಲಾವಿದನು ವ್ಯಕ್ತಿಗತವಾಗಿ ಮತ್ತು ಸಾಂಘಿಕವಾಗಿಯೂ ಸುದೃಢವಾಗಿ ಬೆಳೆಯುವಲ್ಲಿ ಈ ಸಂಸ್ಥೆಯು ಶ್ರಮಿಸುತ್ತಿದೆ. ಕಲಾವಿದರ ಜೀವನ ಭದ್ರತೆ ನಮ್ಮ ಉದ್ದೇಶವಾಗಿದೆ. ಇದಕ್ಕೆಲ್ಲಾ ಕಲಾವಿದರು ಉದಾರತೆ ತೋರಬೇಕು ಎಂದು ಸುರೇಂದ್ರಕುಮಾರ್ ಅಧ್ಯಕ್ಷೀಯ ಭಾಷಣವನ್ನುದ್ದೇಶಿ ನುಡಿದರು.
ಮಹಾರಾಷ್ಟ್ರದಾದ್ಯಂತ ವೈದಿಧ್ಯತೆಯ ಕಲಾವಿದರು ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಕಲಾವಿದರು ಎಂದರೆ ಬರೇ ರಂಗಭೂಮಿ ಮತ್ತುಸಿನೇಮಾ ರಂಗದ ಕಲಾವಿದರು ಮಾತ್ರ ಬಹುತೇಕ ಗುರುತಿಸಿ ಕೊಳ್ಳುತ್ತಿದ್ದಾರೆ. ಇವೆರಡಕ್ಕೆ ಮಾತ್ರ ಕಲಾಕಾರರು ಸೀಮಿತವಾಗದೆ ಅಖಂಡ ಕಲಾವಿದರು ಒಂದೇ ವೇದಿಕೆಯಡಿಯಲ್ಲಿ ಸೇರ್ಪಡೆಗೊಂಡು ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು. ಅದಕ್ಕಾಗಿ ಪರಿಷತ್ತು ಸರ್ವ ಕಲಾವಿದರಿಗೆ ಸಿಮಿತವಾಗಿಸಿ ಕಲಾವಿದರ ಕೈಪಿಡಿಯನ್ನು ಪ್ರಕಾಶಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇದು ಪುಸ್ತಕರೂಪ ಪಡೆದು ದಾಖಲೆಯ ಕೃತಿಯಾಗಿ ಹೊರತರಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಸರ್ವ ಕಲಾವಿದರೂ, ಕಲಾಭಿಮಾನಿ, ಹಿತೈಷಿಗಳೂ ಕೈಜೋಡಿಸಿದ್ದಲ್ಲಿ ದಾಖಲಾತ್ಮಕ ಪುಸ್ತಿಕೆಯಾಗಿ ಹೊರತರಲಿದ್ದೇವೆ.
ಅಂತೆಯೇ ಆರೋಗ್ಯನಿಧಿ, ವಿಮಾಯೋಜನೆ ನಮ್ಮ ಯೋಜನೆಯಾಗಿದ್ದು ಇವೆಲ್ಲಕ್ಕೂ ಧನಸಂಗ್ರಹ ಅಗತ್ಯವಿದೆ. ಧನಸಂಗ್ರಹ ವಿನಃ ಸಸ್ಥೆಯ ಅಡಿಪಾಯ ಗಟ್ಟಿಯಾಗಲಾರದು. ಹಣಮತ್ತು ಜನ ಬೆಂಬಲದಿಂದಲೇ ಅಡಿಪಾಯ ಭದ್ರವಾಗುವುದು ಎಂದೂ ಸುರೇಂದ್ರಕುಮಾರ್ ತಿಳಿಸಿದರು. ಗೌ| ಪ್ರ| ಕಾರ್ಯದರ್ಶಿ ನಾವುಂದ ರಾಜು ಶ್ರೀಯಾನ್ ಏಳನೇ ಗತ ಮಹಾಸಭೆಯ ವರದಿ ವಾಚಿಸಿದರು. ಖಜಾಂಚಿ ಪಿ.ಬಿ.ಚಂದ್ರಹಾಸ್ ವಾರ್ಷಿಕ ಆಯವ್ಯಯ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಬಳಿಕ ಅಂತರಿಕ ಲೆಕ್ಕ ಪರಿಶೋಧಕರನ್ನಾಗಿ ಕೆ.ವಿ ಆರ್ ಐತಾಳ್ ಮತ್ತು ರಾವ್ ಎಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯನ್ನು ಕಾನೂನು ಪರಿಶೋಧಕರ ಆಯ್ಕೆ ನಡೆಸಲಾಯಿತು.ಸಭೆಯಲ್ಲಿ ಸಂಚಾಲಕಿ ಕುಸುಮಾ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ದಾಮೋದರ್ ಶೆಟ್ಟಿ ಇರುವೈಲು, ಅಶೋಕ್ ಸಸಿಹಿತ್ಲು, ಕರ್ನೂರು ಮೋಹನ್ ರೈ, ಪದ್ಮನಾಭ ಸಸಿಹಿತ್ಲು, ಜ್ಯೂಲಿಯೆಟ್ ಪಿರೇರಾ ಉಪಸ್ಥಿತರಿದ್ದು, ಡಾ| ಸುನೀತಾ ಎಂ.ಶೆಟ್ಟಿ, ಎಚ್.ಬಿ.ಎಲ್.ರಾವ್, ಕೆ.ಕೆ ಶೆಟ್ಟಿ, ಡಾ| ವ್ಯಾಸರಾಯ ನಿಂಜೂರು, ತೋನ್ಸೆ ವಿಜಯಕುಮಾರ್ ಶೆಟ್ಟಿ, ಗುರುರಾಜ್ ಎಸ್.ನಾಯಕ್, ಅನಿಲ್ ಹೆಗ್ಡೆ, ಮೋಹನ್ ಮಾರ್ನಾಡ್, ಓಂದಾಸ್ ಕಣ್ಣಂಗಾರ್, ಅರವಿಂದ್ ಶೆಟ್ಟಿಕೊಜಕೊಳ್ಳಿ, ತಾರಾ ಬಂಗೇರಾ, ವಿಠಲ್ ಪ್ರಭು, ಎಸ್.ಟಿ
ವಿಜಯಕುಮಾರ್ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಪರಿಷತ್ತ್‍ನ ಸೇವೆ ಪ್ರಶಂಸಿಸಿ ಭವಿಷ್ಯದ ಸರ್ವೋನ್ನತಿಗಾಗಿ ಸಲಹೆ-ಸೂಚನೆಗಳನ್ನಿತ್ತರು. ಪರಿಷತ್ತುನ ಅಧ್ಯಕ್ಷಸುರೇಂದ್ರಕುಮಾರ್ ಹೆಗ್ಡೆ ಅವರು ತೋನ್ಸೆ ವಿಜಯಕುಮಾರ್ ಶೆಟ್ಟಿ, ಎನ್ ಟಿ ಪೂಜಾರಿ ಅತ್ತು ಕಮಲಾಕ್ಷ ಸರಾಫ್ ಅವರ ವೈಶಿಷ್ಟ್ಯವಾದ ರಂಗಸೇವೆಯನ್ನು ಮನವರಿಸಿ ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ರಂಜನಿ ಮೊೈಲಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಕಮಲಾಕ್ಷಸರಾಫ್ ಸ್ವಾಗತಿಸಿದರು. ರಮೇಶ್ ಶಿವಪುರ ಸಭಾ ಸಮನ್ವಯತೆ ನಡೆಸಿದರು. ಜೊತೆ ಖಜಾಂಚಿ ನವೀನ್ ಶೆಟ್ಟಿ ಇನ್ನಬಾಳಿಕೆ ಕೃತಜ್ಞತೆ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *