ಹರಕೆ ವಂಚನೆವಾದಾಗಲೇ ಬದುಕೂ ಮೋಸವಾಗುವುದು: ಸುಗುಣೇಂದ್ರಶ್ರೀ
ಮುಂಬಯಿ: ದೇವರ ಬಗ್ಗೆ ಜ್ಞಾನಬಂದಾಗ ಭಕ್ತಿ ಇಮ್ಮಡಿಗೊಳ್ಳುವುದು. ಭಕ್ತಿಶಕ್ತಿಯುತ ಗೊಂಡಾಗಲೇ ನಿಷ್ಕರ್ಮದಿಂದಜೀವನ ಪಾವನವಾಗುತ್ತದೆ. ಆದುದರಿಂದ ಕಷ್ಟಕಾಲಕ್ಕೆದೇವರಲ್ಲಿ ಹೊರೆಸಿಕೊಂಡಹರಕೆಗಳನ್ನು
ಶೀಘ್ರಗತಿಯಲ್ಲೇ ಸಂದಾಯ ಮಾಡಬೇಕು. ಇಂತಹ ಹರಕೆ ಸಂದಾಯ ನಿಷ್ಕಲಂಕವಾಗಿರಲಿ ಎಂದು ಉಡುಪಿ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಿತೋಪದೇಶ ನೀಡಿದರು.

 

Puttige Swamiji @ Pejawara Mutt-A2

Puttige Swamiji @ Pejawara Mutt-A3

Puttigeshree@Pejawara Pravachana-2

Puttigeshree@Pejawara Pravachana-5

Puttigeshree@Pejawara Pravachana-6

Puttigeshree@Pejawara Pravachana-9

Puttigeshree@Pejawara Pravachana-10

Puttigeshree@Pejawara Pravachana-12

Puttigeshree@Pejawara Pravachana-16

Puttigeshree@Pejawara Pravachana-21

Puttige Swamiji @ Pejawara Mutt-A1ಮುಂಬಯಿಯಲ್ಲಿ 41ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣಾ ನಿಮಿತ್ತ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ನಡೆಸಿದ ಮೂರುದಿನಗಳ ಶ್ರೀಕೃಷ್ಣ ವಿಶೇಷ
ಪ್ರವಚನ ಮಾಲಿಕೆ ಸಮಾರೋಪವನ್ನುದ್ದೇಶಿಸಿ ಪುತ್ತಿಗೆಶ್ರೀ ಮಾತನಾಡಿ ದೇವರನ್ನು ಮರೆಯುವುದರಿಂದಲೇ ಕಷ್ಟಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಹರಕೆ ಸಂದಾಯ ದೇವರಿಗೆ ಆವಿಶ ಒಡ್ಡುವುದರಿಂದ
ಅವಿಘ್ನವಾಗಿ ಪರಿಣಮಿಸ ಬೇಕಾಗುವುದು. ಹರಕೆ ವಂಚನೆಆದಾಗಲೇ ಬದುಕು ಮೋಸವಾಗಿ ಪರಿಣಮಿಸ ಬಲ್ಲದು. ಆದುದರಿಂದ ಹರಕೆ ಸೇವಾರ್ಪಣೆಯಾಗಲಿ. ಕೆಲಸ ಆಗುವ ಮೊದಲು ಹರಕೆ ಸಂದಾಯವಾದರೆ ಎಲ್ಲವೂ
ಒಳಿತಾಗುವುದು. ಕೆಲಸವಾದ ಬಳಿಕ ಹರಕೆ ಸಂದಾಯ ಮಾಡುವುದಾದರೆ ಅದು ವ್ಯಾವಹಾರ (ಬಿಸ್ನೆಸ್) ಆಗಿ ಪರಿಣಮಿಸುವುದು. ಇಂತಹ ಬಿಸ್ನೆಸ್ ಮನೋಭಾವ ಸೃಷ್ಟಿಕರ್ತ ದೇವರಿಗೆ ಮೋಸ ಮಾಡಿದಂತಾಗುವುದು.
ಉಪಕಾರ ಮಾಡಿದವರಿಗೆ ಪ್ರತಿಕಾರ ಸಲ್ಲದು. ಇದಕ್ಕೆ ದೇವರ ಅನುಗ್ರಹವೂವಿರದು ಎಂದರು. ಕಳೆದ ಸೋಮವಾರ ರಾತ್ರಿ ಮಹಾಲಯ ಆರಂಭದ, ಭಾದ್ರಪದ ಹುಣ್ಣಿಮೆಯಂದು ಶ್ರೀ ಪೇಜಾವರ ಮಠದಲ್ಲಿ ಮಾಸಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಪಾಲ್ಗೊಂಡು ಮಹಾರತಿಗೈದು ಪುತ್ತಿಗೆಶ್ರೀ ಮಾತನಾಡಿ ನೆರೆದ ಭಕ್ತಾಧಿಗಳನ್ನು ಅನುಗ್ರಹಿಸಿದರು. ಪೇಜಾವರ ಮಠದ ಶಾಖೆಯ ಆಡಳಿತಾಧಿಕಾರಿ ರಾಮದಾಸ ಉಪಾಧ್ಯಾಯ ಮತ್ತು ವಾಣಿ ರಾಮದಾಸ್ ದಂಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಫಲಪುಷ್ಪವನ್ನಿತ್ತು ಆರತಿ ನೆರವೇರಿಸಿ ಗೌರವಾರ್ಪಣೆಗೈದರು. ಶ್ರೀ ಪೇಜಾವರ ಮಠದ ಗುರುಮೂರ್ತಿ ಭಟ್, ಮಠದ ಶಾಖಾಧಿಕಾರಿ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಮತ್ತು ನಿರಂಜನ್ ಗೋಪ್ಟೆ, ಗಿರೀಶ್ ಪಾಟೀಲ, ಮುಕುಂದ ಬೈತ್ತಮಂಗಳ್ಕರ್, ರಾಘವೇಂದ್ರ ಭಟ್, ಉಪಸ್ಥಿತರಿದ್ದು, ವಿಷ್ಣುತೀರ್ಥ ಸಾಲಿ ಮತ್ತು ರಾಮದಾಸ ಉಪಾಧ್ಯಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಹರಸಿದರು.

By suddi9

Leave a Reply

Your email address will not be published. Required fields are marked *