ಮುಂಬಯಿ: ದಿ. ಭಾರತ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಬಂಟ್ವಾಳ (ಬಿ.ಸಿ.ರೋಡ್) ಶಾಖೆಯ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತ್ ಬ್ಯಾಂಕ್ ಹಾಗೂ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು, ನೇತ್ರ ಚಿಕಿತ್ಸಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವು ಕಳೆದ ಭಾನುವಾರಬ್ಯಾಂಕ್‍ನಲ್ಲಿ ನಡೆಸಲಾಗಿದ್ದು, ಹರೀಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ಗುರುಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಎ.ಜೆ ವೈದ್ಯಕೀಯ ಮಹಾವಿದ್ಯಾಲಯದ ಕಣ್ಣಿನ ವಿಭಾಗದ ಮುಖ್ಯಸ್ಥಡಾ| ಸುಧೀರ್ ಹೆಗ್ಡೆ(ಮುಖ್ಯಸ್ಧರು ಕಣ್ಣಿನ ವಿಭಾಗ) ದೀಪ ಬೆಳಗಿಸಿ ಉದ್ಘಾಟಿಸಿದರು.

Bharat Bank Bantwal-2

001

002

ಈ ಸಂದರ್ಭದಲ್ಲಿ ಆಸ್ಪತ್ರೆಯ ಜಯರಾಜ್ ಸುವರ್ಣ, ಡಾ| ಮನೋಹರ್ ರೈ, ಬಿಲ್ಲವ ಮಹಾ ಮಂಡಲದ ವಕ್ತಾರಹರೀಕೃಷ್ಣ ಬಂಟ್ವಾಳ, ಬಿಲ್ಲವ ಸಂಘದ ಅಧ್ಯಕ್ಷಸೇಸಪ್ಪ ಕೋಟ್ಯಾನ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿರ್ವ ಸೆಂಟರ್‍ನ ನೀರ್ದೇಶಕ ಸಂಜೀವ ಪೂಜಾರಿ, ಪ್ರಕಾಶ್ ಸೋಮಾಯಜಿ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ರಿಚರ್ಡ್ ಸಿಕ್ವೇರಾ, ಉದಯ್ ರೈ, ಜಿ.ಆನಂದ್, ಗುರುಕೃಪಾದ ಸಂಜೀವ ಪೂಜಾರಿ, ಮುಖ್ಯ ಪ್ರಬಂಧಕ ರಾಘವ ಬಂಗೇರ, ಸಹಾಯಕ ವ್ಯವಸ್ಥಾಪಕಿ ಶಕುಂತಳಾ ನರೇಂದ್ರ, ಸಿಬ್ಬಂದಿ ಬಾಸ್ಕರ್ ಸರಪಾಡಿ (ಬೆಂಗಳೂರು) ಉಪಸ್ಧಿತರಿದ್ದರು. ಬ್ಯಾಂಕ್‍ನ ಸಹಾಯಕ ಪ್ರಧಾನ ಪ್ರಬಂಧಕ ಬಾಲಕೃಷ್ಣ ಕರ್ಕೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಬ್ಯಾಂಕ್‍ನ ಗ್ರಾಹಕರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಉಚಿತವಾಗಿ ನುರಿತ ವ್ಯೆದ್ಯರಿಂದ ಕಣ್ಣಿನ ತಾಪಾಸಣೆ ಮಾಡಿಸಿ ಕೊಂಡರು. ಅಗತ್ಯವುಳ್ಳವರಿಗೆ ಕನ್ನಡಕ ವಿತರಿಸಲಾಯಿತು. ಶಾಖೆಯ ಮುಖ್ಯಸ್ಥೆಹೇಮ ಸುವರ್ಣಧನ್ಯವಾದಸಮರ್ಪಿಸಿದರು.

By suddi9

Leave a Reply

Your email address will not be published. Required fields are marked *