ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಬಂಟ್ವಾಳ ಇದರ 32ನೇ ವಾರ್ಷಿಕತುಳುನಾಡಶ್ರೀ ಪ್ರಶಸ್ತಿ ಕಬ್ಬಡಿ ಪಂದ್ಯಾಟವುದಕ್ಷಿಣ ಕನ್ನಡಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಶನ್ ಸಹಭಾಗಿತ್ವಹಾಗೂ ಸ್ವಸ್ತಿಕ್ ಫ್ರೆಂಡ್ಸ್‍ನ ಸ್ಥಾಪಕಾಧ್ಯಕ್ಷಹಾಗೂದ.ಕಮಾಜಿಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವಮತ್ತು ಮುಂಬಯಿ ಅಲ್ಲಿನ ಹೆಸರಾಂತ ಕಬ್ಬಡ್ಡಿ ಪಂದ್ಯಾಟದ ಸಂಘಟಕಸುರೇಶ ಶೆಟ್ಟಿ ಯೆಯ್ಯಾಡಿ ಸಾರಥ್ಯದಲ್ಲಿ ಪೆÇ್ರಕಬ್ಬಡಿ ಮಾದರಿಯಲ್ಲಿ 60 ಕೆ.ಜಿ. ವಿಭಾಗದ ಕಬ್ಬಡಿ ಪಂದ್ಯಾಟವು ದಿನಾಂಕ 08. ನವೆಂಬರ್.2015ರಂದು ಬೆಳಿಗ್ಗೆ 10.30 ಗಂಟೆಯಿಂದ ಪುಂಜಾಲಕಟ್ಟೆ ಬಂಗ್ಲೆಮೈದಾನದಲ್ಲಿ ನೇರವೇರಲಿದೆ.
ಪ್ರಥಮ ಬಹುಮಾನ 30,000/- ರೂಪಾಯಿ ನಗದು ಮತ್ತುತುಳುನಾಡಶ್ರೀ ಪ್ರಶಸ್ತಿ,

ದ್ವಿತೀಯ ಬಹುಮಾನ 20,000/- ರೂಪಾಯಿ ನಗದು ಮತ್ತು ತುಳುನಾಡಶ್ರೀ ಪ್ರಶಸ್ತಿ,

ತೃತೀಯ ಬಹುಮಾನ 10,000/- ರೂಪಾಯಿ ನಗದು ಮತ್ತು

ತುಳುನಾಡಶ್ರೀ ಪ್ರಶಸ್ತಿ, ಚತುರ್ಥ ಬಹುಮಾನ 8,000/- ರೂಪಾಯಿ ನಗದು ಮತ್ತು

ತುಳುನಾಡಶ್ರೀ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು. ಪಂದ್ಯಾಟದ ಸವ್ಯಸಾಚಿ, ಉತ್ತಮ ಹಿಡಿತಗಾರ,

ಉತ್ತಮ ದಾಳಿಗಾರ ವೈಯಕ್ತಿಕ ಬಹುಮಾನಗಳೂ ಇವೆ. ಆಯ್ಕೆಗೊಳಿಸಿದ 28 ತಂಡಗಳಿಗೆ ಮಾತ್ರ
ಅವಕಾಶವಿದ್ದು, ಭಾಗವಹಿಸಲಿಪ್ಛಿಸುವ ತಂಡಗಳು ದಿನಾಂಕ 01.ನ.2015ರ ಒಳಗಾಗಿ ತಮ್ಮ ತಂಡಗಳನ್ನು
ರೂಪಾಯಿ 1,000/- ಪ್ರವೇಶ ಶುಲ್ಕದೊಂದಿಗೆಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್, ಪುಂಜಾಲಕಟ್ಟೆ, ಬಂಟ್ವಾಳ ತಾಲೂಕು,
ದ.ಕ-574233 ವಿಳಾಸದಲ್ಲಿ ನೋಂದಾಯಿಸುವಂತೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ ಕಾರ್ಯದರ್ಶಿ ಜಯರಾಜ್
ಅತ್ತಜೆ ಈ ಮೂಲಕ ವಿನಂತಿಸಿ ಕೊಂಡಿದ್ಡಾರೆ.

Punjalakatte Kabaddi
ಫ್ರಾನ್ಸಿಸ್ ವಿ.ವಿ-9449332283, ಪಿ.ರಾಜೇಶ್-9901098038, ಚಂದ್ರಶೇಖರ ಮಧ್ವ-9449100981
ಸಂಖ್ಯೆಗಳಿಗೆ ಕರೆ ಮಾಡಿ ಹೆಚ್ಚಿನ ವಿವರಗಳನ್ನು ಪಡೆಯುವಂತೆ ಸ್ವಸ್ತಿಕ್ ಫ್ರೆಂಡ್ಸ್‍ನ ಸ್ಥಾಪಕಾಧ್ಯಕ್ಷ
ಎಂ.ತುಂಗಪ್ಪ ಬಂಗೇರ ಈ ಮೂಲಕ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *