ಕುಂದಾಪುರ: ಪತಿಯನ್ನು ತ್ಯಜಿಸಿ ಪರಪುರುಷನೊಂದಿಗೆ ಸಂಸಾರ ಹೂಡಿದ್ದ ಮಹಿಳೆಯನ್ನು ಕೊಲೆ ನಡೆಸಿದ ಘಟನೆ ಕುಂಭಾಸಿಯ ಕೊರಗ ಕಾಲನಿಯಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಕೊಲೆಗೀಡಾದ ಮಹಿಳೆಯನ್ನು ಇಲ್ಲಿನ ನಿವಾಸಿ ಜಯಮಾಲಾ(38) ಎಂದು ಗುರುತಿಸಲಾಗಿದ್ದು, ಈಕೆಯ ಜೊತೆ ಲಿವಿಂಗ್ ಟುಗೆದರ್ ಇಟ್ಟುಕೊಂಡಿದ್ದ ಕುಂಭಾಸಿಯ ಪಾಪಣ್ಣ ಕೊಲೆ ನಡೆಸಿದ ಶಂಕೆ ವ್ಯಕ್ತವಾಗಿದೆ.
ಬೇಜಾಡಿ ರೋಶನಿಧಾಮದ ನಿವಾಸಿಯಾಗಿರುವಈಕೆ ರಮೇಶ್ ಎಂಬಾತನ ಜೊತೆ ಮದುವೆಯಾಗಿದ್ದಳು.

 

Kundapur her husband had abandoned the family with parapurusana woman suspected of the murder mystery savu (1)

ಮೂರು ವರ್ಷಗಳ ಹಿಂದೆ ಗಂಡನನ್ನು ತ್ಯಜಿಸಿ ಪಾಪಣ್ಣನ ಜೊತೆ ವಾಸವಾಗಿದ್ದಳು. ಕೂಲಿ ಕೆಲಸ ಮಾಡುತ್ತಿದ್ದ ಪಾಪಣ್ಣ ಕಂಠಮಟ್ಟ ಕುಡಿದು ಇಬ್ಬರೂ ಪರಸ್ಪರ ಗಲಾಟೆ ಮಾಡುತ್ತಿದ್ದನೆನ್ನಲಾಗಿದೆ. ಆದರೆ ಬೆಳಿಗ್ಗೆ ನೋಡಿದಾಗ ಈಕೆಯ ಶವ ಕೊಟ್ಟಿಗೆಯಲ್ಲಿ ಕಂಡುಬಂದಿದ್ದು, ಕುಡಿದ ಮತ್ತಿನಲ್ಲಿ ಪಾಪಣ್ಣ ಹಿಗ್ಗಾಮಗ್ಗ ಥಳಿಸಿ ಕೊಂದಿದ್ದಾನೆಂದು ಹೇಳಲಾಗಿದೆ. ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ. ಪಾಪಣ್ಣ ಪರಾರಿಯಾಗಿದ್ದಾನೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದ, ಕುಂದಾಪುರ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

By suddi9

Leave a Reply

Your email address will not be published. Required fields are marked *