ಬಂಟ್ವಾಳ:.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿವೀರಕಂಭ ಇಲ್ಲಿ ಸೆ. 23 ರಂದು ಶಾಲಾ ಆವರಣದಲ್ಲಿ ಅಡಿಕೆ ತೋಟವನ್ನು ಪ್ರಾರಂಭಿಸಲಾಯಿತು.
ಈ ಪ್ರಯುಕ್ತ ಇಂಟರ್ ಮಂಗಳ ತಳಿಯ ಗಿಡಗಳನ್ನು ಉದಾರವಾಗಿ ನೀಡಿದ ಶ್ರೀಯುತ ಗಣೇಶ ಮಯ್ಯ ಸಿಂಗೇರಿ ತೋಟ ಹಾಗೂ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಯಾದ ಶ್ರೀಯುತ ರಾಜೇಶ್ ಇವರು ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಕೃಷಿಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಕೃಷಿಯ ಮಹತ್ವ ತಿಳಿಯುವಂತಾಗುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಸ್ವಾವಲಂಬನೆಯ ಬದುಕಿಗೆ ದಾರಿಯಾಗುತ್ತದೆ ಎಂದು ತಿಳಿಸಿದರು.

ವೀರಕಂಭ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ ಶ್ರೀಯುತ ನಿಶಾಂತ್ ರೈಯವರು ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆಸುವುದರಿಂದ ಶಾಲಾ ಆವರಣದಲ್ಲಿ ಹಸಿರು ವಾತಾವರಣದೊಂದಿಗೆ ಉತ್ತಮ ಪರಿಸರದ ಜೊತೆಗೆ ಆರ್ಥಿಕ ರೀತಿಯ ಬೆಳವಣಿಗೆಗೂ ಪೂರಕವಾಗಿದೆ. ಇದೇ ರೀತಿಯಲ್ಲಿ ಹಲವು ಕಾರ್ಯಕ್ರಮಗಳು ನೆರವೇರಲಿ ಎಂದು ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ರಾಮಚಂದ್ರ ಪ್ರಭು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಯುತ ಸಂಜೀವ ಮೂಲ್ಯ ಹಾಗೂ ಸದಸ್ಯರು ಮತ್ತು ಮಾತೃಶ್ರೀ ಗೆಳಯರ ಬಳಗದ ಪ್ರತಿನಿಧಿ ಛಾಯಾಗ್ರಾಹಕರಾದ ಶ್ರೀಯುತ ಚಿನ್ನ ಮೈರಾ ರವರು ಭಾಗವಹಿಸಿದ್ದರು.
ಮುಖ್ಯಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶಕುಂತಲಾ ಎಂ.ಬಿ ಧನ್ಯವಾದವಿತ್ತರು. ಸಹಶಿಕ್ಷಕಿಯರಾದ ಶ್ರೀಮತಿ ಸಂಗೀತ ಶರ್ಮ, ಸಿಸಿಲಿಯಾ, ಗೀತಾ ಹಾಗೂ ಕುಮಾರಿ ಜ್ಯೋತಿ ಸಹಕರಿಸಿದರು.
