ಬಂಟ್ವಾಳ:ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ನಡೆಸುವ ಮೂಲಕ ನಾಗರಿಕರು ಪಹಣಿಪತ್ರ ತಿದ್ದುಪಡಿ ಮತ್ತು ಪಿಂಚಣಿಗಾಗಿ ಅಲೆದಾಟ ನಡೆಸಬೇಕಿಲ್ಲ. ಇನ್ನೊಂದೆಡೆ ‘ಪೋಡಿ ಅದಾಲತ್’ ಮೂಲಕ ಜಮೀನು ಸರ್ವೆಗೆ ಸಂಬಂಧಿಸಿದಂತೆ ಬಾಕಿ ಇರುವ ಕಡತಗಳು ತ್ವರಿತವಾಗಿ ವಿಲೇವಾರಿಯಾಗುತ್ತದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದ್ದಾರೆ.
ತಾಲ್ಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯಿತಿನಲ್ಲಿ ಬುಧವಾರ ನಡೆದ ಏಳು ಗ್ರಾಮಗಳ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಪಹಣಿಪತ್ರ ತಿದ್ದುಪಡಿ ಪ್ರಕ್ರಿಯೆ ನಡೆಸಿ ಬಳಿಕ ಮಾತನಾಡಿದರು.

ಇದೇ ವೇಳೆ ಸ್ಥಳೀಯ ಸಂಗಬೆಟ್ಟು, ಕರ್ಪೆ , ರಾಯಿ, ಕೊಯಿಲ, ಅರಳ, ಪಂಜಿಕಲ್ಲು, ಮೂಡುನಡುಗೋಡು ಗ್ರಾಮಗಳ ಒಟ್ಟು 41 ಮಂದಿ ಅರ್ಹ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಮಂಜೂರಾತಿ ಪತ್ರ ವಿತರಿಸಿದರು.
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ರೇವತಿ ಆರ್.ಪೂಜಾರಿ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ ಪೂಜಾರಿ, ಅರಳ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಪಂಜಿಕಲ್ಲು ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು, ಮಾಜಿ ಉಪಾಧ್ಯಕ್ಷ ದೇವಪ್ಪ ಕರ್ಕೇರ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ಶ್ರೀಧರ ಎಸ್.ಪಿ. ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮಕರಣಿಕರಾದ ಶಿವಾನಂದ ಸಂಗಬೆಟ್ಟು, ಅನಿಲ್ ಪಂಜಿಕಲ್ಲು, ಪವಿತ್ರಾ ರಾಯಿ, ಪ್ರವೀಣ ಮೂಡುನಡುಗೋಡು, ವಂದನಾ, ಕಂದಾಯ ಇಲಾಖೆಯ ರೇಖಾ, ಮುಂಡಪ್ಪ ಮತ್ತಿತರರು ಕಡತ ವಿಲೇವಾರಿಯಲ್ಲಿ ಪಾಲ್ಗೊಂಡರು.
ಉಪತಹಶೀಲ್ದಾರ್ ಜೆ.ಪಿ.ರಾಡ್ರಿಗಸ್ ಸ್ವಾಗತಿಸಿ, ಉಪತಹಶೀಲ್ದಾರ್ ಆಸಿಫ್ ಇಕ್ಬಾಲ್ ವಂದಿಸಿದರು.
.
