ಕೈಕಂಬ:ಮಕ್ಕಳು ಮತ್ತು ಶಿಕ್ಷಕರ ನಡುವೆ ಸ್ನೇಹ ಸಂಬಂಧ ಇರಬೇಕು, ಗಂಡು, ಹೆಣ್ಣು ಶ್ರೀಮಂತ, ಬಡವ ಎಂಬ ತಾರತಮ್ಯ ಮಾಡಬಾರದು, ಯಾವುದೇ ರೀತಿಯಲ್ಲಿ ಶೋಷಿಸುವ ಅಥವಾ ನಿಂದನೀಯವಾಗಿ ಪರಿಗಣಿಸುವ ಸಂಬಂಧಗಳನ್ನು ಇಟ್ಟುಕೊಳ್ಳಬಾರದು ಎಂದು ಕೊಪ್ಪಳ ಜಿಲ್ಲೆಯ ಯುನಿಸೆಫ್ ಕಾರ್ಯಕ್ರಮ ಸಂಯೋಜಕರಾದ ಹರೀಶ್ ಜೋಗಿ ಹೇಳಿದರು. ಅವರು ವಾಮಂಜೂರಿನ ಚೈಲ್ಡ್ ಪಂಡ್ ಇಂಡಿಯಾ ಮಂಗಳಜ್ಯೋತಿ ಸಮಗ್ರ ಶಾಲೆಯ ವತಿಯಿಂದ ಮಕ್ಕಳ ರಕ್ಷಣೆಯ ನೀತಿ ಸಂಹಿತೆ ಕಾರ್ಯಗಾರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಇಂದಿನ ಮಕ್ಕಳನ್ನು ಭವಿಷ್ಯದ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು. ಮಕ್ಕಳ ಹಕ್ಕುಗಳ ಒಡಂಬಡಿಕೆ, ಫೋಕ್ಸ್ ಖಾಯಿದೆ ಮತ್ತು ಬಾಲ್ಯವಿವಾಹ ತಡೆ ಬಗ್ಗೆ ಮಾಹಿತಿಯನ್ನು ನೀಡಿದರು.

4

3
ಕಾರ್ಯಕ್ರಮವು ಸೆ.21ರಂದು ಸೋಮವಾರ ಮಂಗಳಜ್ಯೋತಿ ಸಮಗ್ರ ಶಾಲೆಯ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಶಾಲಾ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು. ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿಯಾದ ಗಣೇಶ್ ಭಟ್ ಪ್ರಸ್ತಾವಿಸಿ ಸ್ವಾಗತಿಸಿದರು. ಚೈಲ್ಡ್ ಪಂಡ್ ಇಂಡಿಯಾ ಮಂಗಳ ಜ್ಯೋತಿಯ ಕಾರ್ಯಕ್ರಮ ಸಂಯೋಜಕರಾದ ಹರೀಶ್ ಕುಲಶೇಖರ ವಂದಿಸಿದರು.

By suddi9

Leave a Reply

Your email address will not be published. Required fields are marked *