ಮೂಡುಬಿದಿರೆ: ಇಲ್ಲಿನ ಎರಡು ಕೋಳಿ ಮಾಂಸ ಸ್ಟಾಲ್‍ಗಳಲ್ಲಿ ದರ ಸಮರವು ರವಿವಾರವೂ ಮುಂದುವರೆದಿದ್ದು ಮೂಡುಬಿದಿರೆಯ ಆಸುಪಾಸಿನ ಜನರು ಮಾಂಸ ಖರೀದಿಗಾಗಿ ರವಿವಾರದಂದು ಎರಡು ಸ್ಟಾಲ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡುತ್ತಿರುವುದು ಕಂಡು ಬಂದಿದೆ.

ಸ್ಟಾಲ್‍ಗೆ ಮಾತ್ರ ಪುರಸಭೆಯು ಒಂದು ದಿನಕ್ಕೆ ಕಡಿಮೆ ಶುಲ್ಕವನ್ನು ವಿಧಿಸುವ ಮೂಲಕ ತನಗೆ ಮೋಸ ಮಾಡಿದೆ ಈ ಬಗ್ಗೆ ನನಗೆ ಪುರಸಭೆಯಲ್ಲಿ ನ್ಯಾಯ ಸಿಗುವವರೆಗೆ ಕೋಳಿ ಮಾಂಸ ವಿಚಾರದಲ್ಲಿ ದರ ಸಮರ ಮುಂದುವರಿಯಲಿದೆ ಎಂದು ಚಿಕನ್ ಸ್ಟಾಲ್ ಸಂಖ್ಯೆ 2 ರ ಗುತ್ತಿಗೆದಾರ ಅತೂರ್ ನಸೀಬ್ ತಿಳಿಸಿದರು. ಅದರಂತೆ
ರವಿವಾರವೂ ಮುಂದುವರೆದಿದ್ದು ಕೋಳಿ ಮಾಂಸ ರೇಟ್ ರವಿವಾರದಂದು 62 ಆಗಿದ್ದು ಎರಡೂ ಸ್ಟಾಲ್‍ನವರೂ ರೂ 70 ದರವನ್ನು ನಿಗದಿ ಪಡಿಸಿ ಮಾರಾಟ ಮಾಡಿದ್ದಾರೆ.

20 mood althaf chikan stall 20 mood naseeb chikan stall

ಹಿಂದೆ ರೂ 25ವರೆಗೂ ಲಾಭವಿಟ್ಟು ಮಾರಾಟ ಮಾಡುತ್ತಿದ್ದ ಗುತ್ತಿಗೆದಾರರು ಇದೀಗ ಕಡಿಮೆ ಲಾಭಾಂಶವನ್ನು ಪಡೆದು ಜನರಿಗೆ ಮಾರಾಟ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರೂ ಕೋಳಿ ಮಾಂಸ ಖರೀದಿಗಾಗಿ ಮೂಡುಬಿದಿರೆಗೆ ಆಗಮಿಸುತ್ತಿದ್ದಾರೆ.

ತೂಕ ಮಾಡಿ ನೀಡುವ ಮಾಂಸದಲ್ಲಿ ಕಡಿಮೆ ಮಾಂಸ ಜನರಿಗೆ ನೀಡುತ್ತಿದ್ದೀರಿ ಎಂದು ಸಾರ್ವಜನಿಕರಿಂದ ಆರೋಪವಿದೆ ಎಂದು ಮಾಧ್ಯಮದವರು ನಸೀಬ್ ಅವರನ್ನ ಪ್ರಶ್ನಿಸಿದಾಗ ಆ ತರಹದಲ್ಲಿ ಯಾರಿಗೂ ಮೋಸ ಮಾಡುತ್ತಿಲ್ಲ. ಫುಲ್ ಕೋಳಿಯನ್ನು ತೂಕ ಮಾಡಿ ನಂತರ ಮಾಂಸ ಮಾಡಿ ನೀಡುವಾಗ 300 ಗ್ರಾಂನಷ್ಟು ತೂಕ ಕಡಿಮೆ ಬರುವುದು ಸಹಜ. ಮಾಂಸಕ್ಕೆ ಕಡಿಮೆ ಬೆಲೆ ಇಟ್ಟಿರುವುದರಿಂದ ತಮಗೇನೂ ನಷ್ಟವಿಲ್ಲ ಎಂದು ತಿಳಿಸಿದ ಅವರು ಪುರಸಭೆ ಸರಿಪಡಿಸುವಲ್ಲಿಯವರೆಗೆ ದರ ಸಮರವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೊಂದು ಸ್ಟಾಲ್‍ನ ಗುತ್ತಿಗೆದಾರ ಅಲ್ತಾಪ್ ಹುಸೈನ್ ಅವರು ಮಾತನಾಡಿ ನಸೀಬ್ ಅವರು ಮೂರು ತಿಂಗಳ ಕಾಲ ಅಂಗಡಿ ಕೋಣೆಯನ್ನು ಬಾಗಿಲು ಹಾಕಿ ಮುಚ್ಚಿಟ್ಟಿರುವುದರಿಂದ ತಾನು ಪುರಸಭೆಯಿಂದ ಕಾನೂನು ಪ್ರಕಾರವಾಗಿ ಪಡೆದು ದಿನವೊಂದಕ್ಕೆ 1500ರಂತೆ ಬಾಡಿಗೆ ನೀಡಿ ವ್ಯಾಪಾರ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *