ಬಜಪೆ: ಬೈಕ್ನಲ್ಲಿ ಕಟೀಲು ಕಡೆಗೆ ಹೋಗುತ್ತಿದ್ಧ ಬೈಕ್ಗೆ ಪೆರ್ಮುದೆ ಸರ್ವೆಸ್ ಸ್ಟೇಶನ್ ಬಳಿ ಗಜ ಹೆದ್ದಾರಿ 67ರಲ್ಲಿ ಟೆಂಪೋ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಯುವಕರನ್ನು ಬಾದಾಮಿ ಮೂಲದ ಶಿವಮೂರ್ತಿ (22) ಹಾಗೂ ಸಂತೋಷ್ ಯಾನೆ ಕೆಂಪ (24) ಕುಶಾಲನಗರ ಮಡಿಕೇರಿ ಇವರಿಬ್ಬರೂ ಬಿಸಿರೋಡು ಬಳಿಯ ಪರಂಗಿಪೇಟೆಯಲ್ಲಿದ್ಧು ಬಜಪೆ ಸಮೀಪದ ಕಲ್ಲುಕೋರೆಯಲ್ಲಿ ಕಾರ್ಮಿಕರಾಗಿದ್ಧರು ಎಂದು ತಿಳಿದುಬಂದಿದೆ

ಟೆಂಪೊ ಪರಾರಿ:
ಅಪಘಾತಕ್ಕೆ ಕಾರಣವಾದ ಟೆಂಪೋ ಚಾಲಕ ತಕ್ಷಣ ಟೆಂಪೋ ಸಹಿತ ಪರಾರಿಯಾಗಿದ್ಧು ಕಟೀಲು ಕಟೆಯಿಂದ ಬಜಪೆ ಕಡೆಗೆ ಹೋಗುತ್ತಿದ್ಧನೆನ್ನಲಾಗಿದೆ.
ಮೃತದೇಹಗಳು ರಸ್ತೆ ಮಧ್ಯೆ: ಅನಾಥ:-
ಬೆಳಿಗ್ಗೆ 7.45ರ ಸುಮಾರಿಗೆ ಅಪಘಾತ ನಡೆದಿದ್ಧು ಖಾಸಗಿ ಅ್ಯಂಬುಲೆನ್ಸ್ ನಲ್ಲಿ ಮೃತದೇಹವನ್ನು ಸಾಗಿಸುವಾಗ 8.45 ಆಗಿತ್ತು. ಒಂದು ಗಂಟೆ ಕಾಲ ರಸ್ತೆ ಮಧ್ಯೆ ಇರಬೇಕಾದ ದುಸ್ಥಿತಿ. ಇದೇ ವೇಳೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಸ್ಕಿಡ್ ಆಗಿ ಬಿದ್ಧ ಬೈಕ್ ಸವಾರರ ಮೇಲೆ ಟೆಂಪೊ ಹರಿದು ಸಾವು ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



