ಮೂಡುಬಿದಿರೆ: ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪದಲ್ಲಿ ಓರ್ವನನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದ ಪ್ರಕರಣ ಬುಧವಾರ ನಡೆದಿದೆ.

mbd_sep16_4

ಆರೋಪಿ ಹಾಸನ ಮೂಲದ ಪ್ರಕಾಶ್ ಕ್ಯಾಸ್ಟಲಿನೋ ಎನ್ನಲಾಗಿದ್ದು ಬೆಳಗ್ಗಿನ ಜಾವ 4.30ರಿಂದ 5 ಗಂಟೆಯ ಒಳಗೆ ಚರ್ಚ್ನಲ್ಲಿದ್ದ ಕಾಣಿಕೆ ಹುಂಡಿಯ ಹಣವನ್ನು ಕಳವು ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಆಂಡ್ರೂ ನೊರೊನ್ನಾ ಮತ್ತು ಪ್ರತಾಪ್ ಡಿ ಸೊಜಾ ಬೆಳಗ್ಗಿನ ಜಾವ ಚರ್ಚ್  ಗೇಟ್ ತೆರೆಯವ ವೇಳೆಗೆ ಸಂಶಯಾಸ್ಪದವಾಗಿ ಓಡಿ ಹೋಗುತ್ತಿದ್ದ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *