ಕೈಕಂಬ:ಕಿನ್ನಿಕಂಬಳ ಶ್ರೀ ರಾಧಕೃಷ್ಣ ಭಜನಾ ಮಂದಿರದಿಂದ ಅಡ್ಡೂರು ಬೆನಕ ಮಂಟಪಕ್ಕೆ ಶ್ರೀ ವಿಘ್ನೇಶ್ವರನ ದೇವರ ವಿಗ್ರಹವು ಮೆರವಣಿಗೆಯಲ್ಲಿ ಬಂದು ಸೆ.17 ರಂದು ಗುರುವಾರ 9.30ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಿಂದ ವಿಗ್ರಹ ಪ್ರತಿಷ್ಠಾಪಿಸುವುದು.
ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿವಿಧ ಭಜನಾ ಕಾರ್ಯಕ್ರಮ. 12 ರಿಂದ 12.30ಕ್ಕೆ “ಗಣಹೋಮ ಪೂರ್ಣಾಹುತಿ” ಮಹಾಪೂಜೆ ಮರ್ದಯಾಹ್ನ 1.30 ರಿಂದ 5.30ರವರೆಗೆ ಸುಬ್ರಹಣ್ಯ ಕಲಾ ಆಟ್ರ್ಸ ಪೊಳಲಿ ಬಡಕಬೈಲು ಇಲ್ಲಿಯ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ
“ಕಾರ್ನಿ ಕದ ಕಲ್ಲುರ್ಟಿ ”
ಸಾಯಂಕಾಲ 5.ರಿಂದ ಸಮಾರೋಪ ಸಮಾರಂಭ
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ಪದ್ಮ ಪಾದನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಉಧ್ಯಮಿ ರಾಜೇಶ್ ನಾಕ್ ಉಳಿಪಾಡಿಗುತ್ತು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ. ಮಂಗಳೂರು ಮಾಜಿ. ತಾ. ಪಂ.ಅಧ್ಯಕ್ಷ ಕೆ. ಹರೀಶ್ ಮೂಡುಶೆಡ್ಡೆ, ಗುರುಪುರ ಮಾಜಿ ಪಂ ಸದಸ್ಯ ಕೆ.ಆದಮ್ ಕಳಸಗುರಿ, ಧಾರ್ಮಿಕ ಉಪನ್ಯಾಶವನ್ನು ದಯಾನಂದ ಕತ್ತಲ್ ಸಾರ್ ನೀಡಲಿದ್ದಾರೆ. ರಾತ್ರಿ 7 ಕ್ಕೆ ಉತ್ಸವ ಮಂಟಪದಿಂದ ಶೋಭಾಯಾತ್ರೆ ಜರಗಳಿದೆ. ಎಂದು ಬೆನಕ ಮಂಟಪದ ಸಾರ್ವಜನಿಕ ಗಣೇಶೋತ್ಸವದ ಪ್ರಕಟನೆ ತಿಳಿಸಿದೆ.
