ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ, ಕೈಕಂಬ ಇದರ 32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ವವವು ಸೆ.17ರಂದು ಗುರುವಾರ ಮತ್ತು 18ರಂದು ಶುಕ್ರವಾರ ಕೈಕಂಬ ಶ್ರೀ ಗಣೇಶ ಮಂಟಪದಲ್ಲಿ ನಡೆಯಲಿದೆ.

kaikamba

ದಿನಾಂಕ 17.09.2015ನೇ ಗುರುವಾರ ಬೆಳಿಗ್ಗೆ ಗಂಟೆ 7.30ಕ್ಕೆ ಶ್ರೀ ವಿಘ್ನೇಶ್ವರ ದೇವರ ವಿಗ್ರಹವು ದಂಡಿ ಮೆರವಣಿಗೆಯಲ್ಲಿ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಿಂದ ಶ್ರೀ ಗಣೇಶ ಮಂಟಪಕ್ಕೆ ಹೊರಡುವುದು. ಬೆಳಿಗ್ಗೆ 8.30ಕ್ಕೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, 9.30ಕ್ಕೆ ಶಾಲಾ ಬಾಲಕ ಬಾಲಕಿಯರಿಗೆ ಸ್ಪರ್ಧೆಗಳು(ಭಕ್ತಿಗೇತೆ, ಜಾನಪದಗೀತೆ, ಗೀತಾ ಕಂಠ, ಭಾಷಣ), 11.00ಕ್ಕೆ ಗಣಹೋಮ, ಪಲ್ಲಪೂಜೆ, ಮಧ್ಯಾಹ್ನ 1.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1.30ಕ್ಕೆ ಭಜನೆ ಶ್ರೀ ಮಂಜುನಾತ ಸ್ವಾಮಿ ಭಜನಾ ಮಂಡಳಿ ಮೊಗರು ಇವರಿಂದ, ಸಂಜೆ 3.30ಕ್ಕೆ ಹರಿಣಿ ಕಲಾವಿದರಿಂದ “ಬಲೇ ತೆಲಿಪಾಲೆ” ಖ್ಯಾತಿಯ ಉತ್ತಮ ಹಾಸ್ಯನಟ ಪ್ರಶಸ್ತಿ ವಿಜೇತ ಅರುಣ್‍ಚಂದ್ರ ಬಿ.ಸಿ.ರೋಡ್ ಬಳಗದಿಂದ “ತೆಲಿಕೆದ ತಮ್ಮನ”, ಸಂಜೆ 5.15ಕ್ಕೆ ಯಕ್ಷಗಾನ ನಾಟ್ಯವೈವಿಧ್ಯ, ರಾತ್ರಿ 9.00ಕ್ಕೆ ಅಲಂಕಾರ ಪೂಜೆ, ರಾತ್ರಿ 9.30ಕ್ಕೆ ರಂಗಪೂಜೆ-ದೀಪಾರಾಧನೆ ವಿಶ್ವರೂಪ ದರ್ಶನಂ, 10.00ಕ್ಕೆ ಮಹಾಪೂಜೆ, 10.30ರಿಂದ ಯಕ್ಷಗಾನ ಬಯಲಾಟ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಧರ್ಮಸ್ಥಳ ಹಾಗೂ ಅತಿಥಿ ಕಲಾವಿದರ ಸಂಗಮದಲ್ಲಿ ಶ್ರೀಕೃಷ್ಣ ಪಾರಿಜಾತ * ನರಕಾಸುರ ವಧೆ * ವಿರೋಚನ ಕಾಳಗ.
ದಿನಾಂಕ 18.09.2015ನೇ ಶುಕ್ರವಾರ ಬೆಳಿಗ್ಗೆ 7.30ರಿಂದ 8.45ರ ತನಕ ಸಮಿತಿ ಸದಸ್ಯರಿಂದ ಭಜನೆ, 9ರಿಂದ 10.15ರ ತನಕ ಪೊಳಲಿ ಚಂದ್ರಶೇಖರ್ ಮತ್ತು ಬಳಗದವರಿಂದ ವಾದ್ಯಗೋಷ್ಠಿ, 10.30ಕ್ಕೆ ಗಣಹೋಮ, 10.30ರಿಂದ 12.30ರ ತನಕ ಭಜನೆ ಶ್ರೀ ಸೀತಾರಾಮ ಭಜನಾ ಮಂದಿರ ನಾರಳ ಮೊಗರು, ಮತ್ತು ಶ್ರೀ ದೇವಿ ಭಜನಾ ಮಂಡಳಿ ಮೂಡುಶೆಡ್ಡೆ, ವಾಮಂಜೂರು, ಮಧ್ಯಾಹ್ನ 12.45ಕ್ಕೆ ಕೇರಳ ಪ್ರಖ್ಯಾತ ಪಯ್ಯಟಂ ಕಲಾವಿದರಿಂದ ಚೆಂಡೆವಾದನ, ಮಧ್ಯಾಹ್ನ 1.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.
ಅಪರಾಹ್ನ 3.30ಕ್ಕೆ ಸಮಾರೋಪ ಸಮಾರಂಭದಲ್ಲಿ ಕೃಷ್ಣರಾಜ ತಂತ್ರಿ ಕುಡುಪು ಇವರು ಆಶೀರ್ವಚನ ನೀಡಲಿದ್ದಾರೆ. ಕೊಡಿಯಾಲ್‍ಗುತ್ತು ಫ್ಯಾಮಿಲಿ ಕ್ಲಿನಿಕ್ ವಾಮಂಜೂರು ಡಾ|ಭುಜಂಗ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಧಾನ ಅತಿಥಿಗಳಾಗಿ ಮಂಗಳಾ ಎಲೆಕ್ಟ್ರಿಕಲ್ಸ್ ಗಂಜಿಮಠ- ಕೈಕಂಬ ಶ್ರೀ ಜಿ. ಭಾಸ್ಕರ ಭಟ್, ಕೆನರಾ ಬ್ಯಾಂಕ್ ಕೈಕಂಬ ಇದರ ಪ್ರಬಂಧಕರು ಶ್ರೀ ಕೆ. ಹರೀಶ್ ನಾಯಕ್, ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆಯ ಪ್ರಾಂಶುಪಾಲರು ಲತಾ ಕೆ., ಉಪಸ್ಥಿತರಿರುವರು ಪ್ರಧಾನ ಭಾಷಣಕಾರರಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಅಧ್ಯಕ್ಷರು ತುಕರಾಮ ಪೂಜಾರಿ. ಸಂಜೆ 6ರಿಂದ ವೈಭವದ ಶೋಭಾಯಾತ್ರೆ ಪ್ರಾರಂಭ, ಸಂಜೆ 6.30ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ-ನಾಟ್ಯ ಸಂಗಮ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
ಸೆ.26ರಂದು ಶನಿವಾರ ರಾತ್ರಿ 9.00ರಿಂದ ಕೈಕಂಬ ಶ್ರೀ ಗಣೇಶ ಕಟ್ಟೆಯ ಬಳಿ, ಜಿಲ್ಲೆಯ ಪ್ರಸಿದ್ದ ಕಲಾವಿದರ ಸಂಗಮದಲ್ಲಿ ಯಕ್ಷಗಾನ ತಾಳಮದ್ದಳೆ “ಇಂದ್ರಜಿತು- ಕರ್ಣಾರ್ಜುನ” ನಡೆಯಲಿದೆ.

By suddi9

Leave a Reply

Your email address will not be published. Required fields are marked *