ಬಂಟ್ವಾಳ: ನೂತನ ಕನ್ನಡ ಚಿತ್ರ ಎನ್ಎಚ್-37ಗೆ ಕಡೇಶೀವಾಲಯದ ಚಿಂತಾಮಣಿ ಶ್ರೀ ಲಕ್ಷೀ ನರಸಿಂಹ ದೇವಾಸ್ಥಾನದಲ್ಲಿ ಬುಧವಾರ ಮುಹೂರ್ತ ನೆರವೇರಿಸಲಾಯಿತು. ಸ್ಥಳೀಯ ಆರಿಕಲ್ಲು ಮನೆತನದ ಶ್ರೀ ಅಮರನಾಥ ಹಾಗೂ ಸುಮಂಗಲಾ ದಂಪತಿ ದೀಪ ಬೆಳಗಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜಗೋಪಾಲ್ ರೈ, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ನೂತನ ಚಿತ್ರಕ್ಕೆ ಶುಭಹಾರೈಸಿದರು.

ಚಿತ್ರದ ನಿರ್ದೇಶಕ ಹರ್ಷವರ್ಧನ್ ಶೆಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ ಇದೊಂದು ವಿಭಿನ್ನ ಕಥೆಯಿರುವ ಚಿತ್ರ. ಕಲಾವಿದರು ತುಳು ಚಲನ ಚಿತ್ರ ಹಾಗೂ ಕಿರಿತೆರೆಗಳಲ್ಲಿ ಅಭಿನಯಿಸಿದ ಅನುಭವ ಹೊಂದಿದವರು. ಮಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರದ ಹೆಚ್ಚಿನ ಚಿತ್ರೀಕರಣ ನಡೆಯಲಿದೆ ಎಂದರು. ಕಲಾವಿದರು ಚಿತ್ರದ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.
ಚಿತ್ರದ ನಾಯಕನಟ ರತನ್ ಕೊಟ್ಟಾರಿ ನಾಯಕಿ ಅನುಶಾ, ಮೇಘನಾ, ಪ್ರೀತಿ, ಛಾಯಾಗ್ರಾಹಕ ಜೀವ ಆ್ಯಂಟನಿ, ಗಣೇಶ್ ನಾಯಕ್, ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.

