ಮಂಗಳೂರು: ಮೀನು ಸಾಗಾಟದ ಲಾರಿಯಡಿ ಬಿದ್ದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜಪ್ಪಿನಮೊಗರು ಬಳಿ ನಡೆದಿದೆ. ಮೃತರನ್ನು ದೇರಳಕಟ್ಟೆ ಮದಕ ನಿವಾಸಿ ಮೋನು (45) ಎಂದು ಗುರುತಿಸಲಾಗಿದೆ.
Jeppu Acdnt
ಮೋನು ಅವರು ಸ್ಕೂಟರ್‍ನಲ್ಲಿ ಜಪ್ಪಿನಮೊಗರು ಸಮೀಪ ಹೋಗುತ್ತಿದ್ದಾಗ ಗೋವಾದಿಂದ ಕೊಚ್ಚಿಗೆ ಮೀನು ಸಾಗಿಸುವ ಮಿನಿ ಲಾರಿಯೊಂದು ಹಿಂಬದಿಯಿಂದ ಅತಿ ವೇಗದಿಂದ ಬಂದು ಮೋನುರ ಸ್ಕೂಟರ್‍ಗೆ ಡಿಕ್ಕಿಯಾಯಿತು. ನೆಲಕ್ಕುರುಳಿದ ಮೋನು ಅವರ ಮೇಲೆ ಲಾರಿ ಚಲಿಸಿದ್ದು ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೋನು ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿದ್ದರು ಎಂದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *