ಮಂಗಳೂರು. ಜಗದೀಶ್ ಚಂದ್ರ ಬೋಸ್ ಅವರು ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದಿದ್ದರು. ಅದೇ ರೀತಿ ಭಾರತದ ಯುವಕರು ನನಗೆ ಸಮಯ ಕೊಡಲಿ, ನಾನು ಅವರಿಗೆ ಭಯೋತ್ಪಾದನಾ ಮುಕ್ತ ದೇಶವನ್ನು ಕೊಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಭಾರತದಲ್ಲಿಯೂ ಐಸಿಸ್‍ಗೆ ಬೆಂಬಲ ಹೆಚ್ಚುತ್ತಿದ್ದು, ಕಾಶ್ಮೀರದಲ್ಲೂ ಇದರ ಧ್ವಜವನ್ನು ಹಾರಿಸಲಾಗುತ್ತಿದೆ, ತಮಿಳುನಾಡಿನಲ್ಲಿ ಕೆಲವು ಯುವಕರು ಐಸಿಸ್ ಟೀ-ಶರ್ಟ್ ಧರಿಸಿ ಛಾಯಾಚಿತ್ರ ತೆಗೆಸಿದ್ದಾರೆ. ಟ್ವಿಟರ್ ಖಾತೆಯನ್ನು ಹೊಂದಿದ್ದ ಐಸಿಸ್ ಉಗ್ರ ಮೆಹ್ದಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು, ಮುಂಬೈ ಸಮೀಪದ ಕಲ್ಯಾಣದಲ್ಲಿನ 4 ಯುವಕರು ಹಾಗೂ ಕೇರಳದಲ್ಲಿನ ಒಬ್ಬ ಪತ್ರಕರ್ತ ನೌಕರಿ ಬಿಟ್ಟು ಐಸಿಸ್‍ಗೆ ಸೇರಿದ್ದಾರೆ. ಇದು ಭಾರತದಲ್ಲಿ ಮುಸಲ್ಮಾನರ ಮೇಲೆ ಐಸಿಸ್ ಪ್ರಭಾವ ತೋರಿಸುತ್ತದೆ. ಇದರ ವಿರುದ್ಧ ಜಾಗೃತಿ ಮೂಡಿಸಲು ಇಂಡಿಯಾ ಎಗೈನ್‍ಸ್ಟ್ ಇಸ್ಲಾಮಿಕ್ ಸ್ಟೇಟ್ ಹೆಸರಿನಲ್ಲಿ ರಾಷ್ಟ್ರಜಾಗೃತಿ ಆಂದೋಲನವನ್ನು ಆರಂಭಿಸಲು ನಿರ್ಣಯಿಸಲಾಗಿದೆ. ಇದರ ಮೊದಲ ಹಂತವಾಗಿ ಜಾಲತಾಣದ ಮೂಲಕ ಕಾರ್ಯ ಆರಂಬಿಸಿದ್ದೇವೆ ಎಂದರು
ಸುದ್ದಿ ಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಗುರುಪ್ರಸಾದ್, ಶ್ರೀರಾಮ ಸೇನೆಯ ಗಂಗಾಧರ ಕುಲಕರ್ಣಿ, ಮಹೇಶ್ ಕೊಪ್ಪ ಮತ್ತಿತರರು ಉಪಸ್ಥಿತಿತದ್ದರು.

