ಮಂಗಳೂರು: ವಿವಿಧ ಠಾಣೆಗಳಲ್ಲಿ ವಾಂಟೆಡ್ ಲಿಸ್ಟ್‍ನಲ್ಲಿದ್ದ. ಕನ್ನ ಹಾಕಿ ದರೋಡೆ ನಡೆಸಲು ನಿಸ್ಸೀಮರಾಗಿದ್ದ ಮೂವರುಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹಾವೇರಿ ಜಿಲ್ಲೆಯ ನಿವಾಸಿ ಕಿರಣ್(22), ಬಜ್ಪೆ ಪೊರ್ಕೋಡಿಯ ನಿವಾಸಿ ಸಂದೀಪ್(23) ಮತ್ತು ತಮಿಳುನಾಡು ನಿವಾಸಿ ಅಶೋಕ್ ಕುಮಾರ್(28) ಎಂದು ಗುರುತಿಸಲಾಗಿದೆ.
ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪಾಂಡೇಶ್ವರ ಠಾಣೆ, ಸುರತ್ಕಲ್ ಠಾಣೆ, ಪೂರ್ವ ಠಾಣೆ, ಗ್ರಾಮಾಂತರ ಠಾಣೆ ಮತ್ತು ಹಾಸನ ಜಿಲ್ಲೆಯ ಠಾಣೆಗಳಲ್ಲಿ ಒಟ್ಟು 11 ಕನ್ನ ಕಳವು ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು. ಬಂಧಿತರಿಂದ 128 ಗ್ರಾಂ. ಚಿನ್ನಾಭರಣ, 10 ತಾಮ್ರದ ಕಟಾರಗಳು, 5 ಘಂಟೆಗಳು, 20 ಕಾಲುದೀಪ, 2 ಲ್ಯಾಪ್‍ಟಾಪ್ ಒಟ್ಟು 4 ಲಕ್ಷ 55 ಸಾವಿರ ರೂಪಾಯಿ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಕಿರಣ್ ಮತ್ತು ಅಶೋಕ್ ಕುಮಾರ್ ಟೆಂಟ್ ವಾಸಿಗಳಾಗಿದ್ದು, ಊರೂರು ಅಲೆಯುತ್ತಾ ಅಪರಾಧವನ್ನು ಪ್ರವೃತ್ತಿಯಾಗಿಸಿಕೊಂಡಿದ್ದರು. ಇವರಿಗೆ ಸುಮಾರು 5 ವರ್ಷದ ಹಿಂದೆ ಮಂಗಳೂರಿನಲ್ಲಿ ಆರೋಪಿ ಸಂದೀಪ್‍ನ ಪರಿಚಯವಾಗಿದೆ. ಗುಜರಿ ಹೆಕ್ಕುವ ನೆಪದಲ್ಲಿ ಹಗಲು ಊರೂರು ತಿರುಗಾಡಿ, ಬೀಗವಿರುವ ಮನೆ ಹಾಗೂ ದೇವಸ್ಥಾನಗಳನ್ನು ಗುರುತಿಸಿ ರಾತ್ರಿ ಹೊತ್ತು ಕನ್ನ ಹಾಕಿ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡುತ್ತಿದ್ದರು. ಎಂದು ಪೊಲೀಸರು ತಿಳಿಸಿದ್ದಾರೆ ಕಿ

