ಬಂಟ್ವಾಳ: ಅದಷ್ಟೋ ಮಂದಿ ವೀರ ಯೋಧರ ಹೋರಾಟದ ಫಲವಾಗಿ 1947 ಆಗಸ್ಟ್ 15ರಂದು ಈ ದೇಶಕ್ಕೆ ಸ್ವಾತಂತ್ರ್ಯ ಬಂತು. ಅಪನಂಬಿಕೆ, ಭ್ರಷ್ಟಾಚಾರ ಹಾಗೂ ಸ್ವಾರ್ಥಕ್ಕಾಗಿ 1975 ಜೂನ್ 25ರಂದು ತುರ್ತು  ಪರಿಸ್ಥಿತಿಯ ಹೆಸರಿನಲ್ಲಿ ಈ ದೇಶದ ಜನ ಮತ್ತೆ ಸ್ವಾತಂತ್ಯವನ್ನು ಕಳೆದು ಕೊಳ್ಳಬೇಕಾಯಿತು. ಅಂತಹ ಪರಿಸ್ಥಿತಿಯಲ್ಲೂ ಲಕ್ಷಾಂತರ ಮಂದಿ ತುರ್ತು  ಪರಿಸ್ಥಿತಿಯ ವಿರುದ್ದ ದೇಶದ ಕಲ್ಯಾಣಕ್ಕಾಗಿ ಸತ್ಯಾಗ್ರಹ ಮಾಡಿದ್ದಾರೆ. ಇಂತಹ ಹೋರಾಟದಲ್ಲಿ ಅವಿಭಜಿತ ಮಂಗಳೂರು ಜಿಲ್ಲೆ ಅಗ್ರಸ್ಥಾನದಲ್ಲಿತ್ತು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

1 (1)

2

3
ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ  ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ತುರ್ತು ಪರಿಸ್ಥಿತಿ ಒಂದು ನೆನಪು ಮತ್ತು ಸಂದೇಶ ಎಂಬ ಮಂಗಳೂರು ವಿ.ವಿ.ಮಟ್ಟದ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಬಳಿಕ ನಡೆದ ವಿಚಾರಗೋಷ್ಟಿಯಲ್ಲಿ ತುರ್ತು  ಪರಿಸ್ಥಿತಿಯ ಘಟನೆಗಳನ್ನು ಮೆಲುಕು ಹಾಕಿದರು.
ಇಂದಿರಾಗಾಂಧಿ ಅಲಹಾಬಾದ್ ಕೋಟರ್ು ನೀಡಿದ ತೀರ್ಪನ್ನು ತಿರಸ್ಕರಿಸಿ 1975 ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಹೊರಡಿಸಿ ದೇಶದ್ಯಾದಂತ ಸಂಘದ ಕಾರ್ಯಕರ್ತರ ಮತ್ತು ಹೋರಾಟಗಾರರ ಮೇಲೆ ದಿಗ್ಬಂಧನ ಹೇರುತ್ತಾರೆ. ತುರ್ತು ಪರಿಸ್ಥಿತಿ ದೇಶಕ್ಕೆ ಮಾರಕ ಅದು ತೊಲಗಬೇಕು ಎಂಬ ಧ್ಯೇಯವನ್ನಿಟ್ಟು 1975 ಸ್ವಾತಂತ್ರ್ಯಕ್ಕೋಸ್ಕರ ಕಾರ್ಯಕರ್ತರು ಹೋರಾಡಿದರು. ಆರ್.ಎಸ್.ಎಸ್. ಮತ್ತು ಭಾ.ಜ.ಪ. ಹೋರಾಟಗಾರರಿಗೆ ಯಾವುದೇ ಅಧಿಕಾರದ ಆಸೆಯಿರಲಿ ಬದಲಾಗಿ ದೇಶವನ್ನು ಸರ್ವಧಿಕಾರದಿಂದ ಮುಕ್ತಗೊಳಿಸುವ ಪಣ ತೊಟ್ಟಿದರು ಎಂದು ಹೇಳಿದರು.
ಅಂದಿನ ಹೋರಾಟದ ನಿಲುವು ಪ್ರಧಾನಿ ಮೋದಿಯವರ ಇಂದಿನ ಆಳ್ವಿಕೆಯಲ್ಲಿ ನಾವು ಕಾಣಬಹುದು. ಅಬ್ದುಲ್ ಕಲಾಂರವರ ಕನಸ್ಸಿನ ಭಾರತದ ಯೋಜನೆಗೆ ಇಂದಿನ ಯುವ ಜನಾಂಗ ಮುನ್ನಡೆಯಾಗಬೇಕು ಎಂದರು.
ಜಯಪ್ರಕಾಶರ ನಾರಾಯಣದ ಧ್ವನಿಗೆ ದನಿ ಗೂಡಿಸಿದವರು ಆರ್ಎಸ್ಎಸ್ನ ಸ್ವಯಂ ಸೇವಕರು. ಎಲ್ಲಾ ಹೋರಾಟಗಾರರನ್ನು ಫ್ಯಾಸಿಸ್ಟ್ಗಳೆಂದು ಕರೆದರು. ಜನಸಂಘದ ದೊಡ್ಡ ದೊಡ್ಡ ನಾಯಕರುಗಳನ್ನು ಬಂಧಿಸಿದರೂ ಪತ್ರಿಕೆಗಳಲ್ಲಿ ಸುದ್ದಿ ಬಾರದಂತೆ ಸೆನ್ಸಾರ್ಶಿಪ್ ಹಾಕುತ್ತಿದ್ದರು. ಭಾರತ ಮಾತೆಗೆ ಜೈ ಎಂದರೆ ದೇಶದ್ರೋಹದ ಘೋಷಣೆ ಮಾಡಿದ್ದಾನೆ ಎಂದು ಆರೋಪಿಸಿ ಬಂಧಿಸುತ್ತಿದ್ದರು. ಇದೇ ಕಾರಣಕ್ಕೆ ನನನ್ನು ಬಂಧಿಸಿ ಶಿವಮೊಗ್ಗ ಜೈಲಿನಿಂದ ಮೀಸಾ ಬಂಧಿಯಾಗಿ ಬೆಳಗಾಂ ಜೈಲಿಗೆ ವರ್ಗಾಯಿಸಿದ್ದರು ಎಂದು ಶಂಕರಮೂರ್ತಿ ವಿವರಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರೇರಿತರಾಗಿ ಹೋರಾಟದಲ್ಲಿ ಧುಮುಕ್ಕಿದ್ದ ಹಲವಾರು ಜೈಲು ಪಾಲಾಗಿದ್ದರು. ನಾವು ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಅರಿವು ನಮ್ಮಲ್ಲಿಲ್ಲದ ಕಾರಣ ನಾವು ಮತ್ತೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಯಿತು. ಹೋರಾಟಕ್ಕೆ ಎಲ್ಲಿಂದ ಹಾಗೂ ಯಾವ ರೀತಿಯ ಪ್ರೇರಣೆಗಳು ಸಿಗುತ್ತವೆ ಎನ್ನುವುದಕ್ಕೆ ತುರ್ತು ಪರಿಸ್ಥಿತಿಯ ಘಟನೆಗಳನ್ನು ನೆನಪಿಸಿಕೊಳ್ಳಬೇಕು ಎಂದರು.
ರಾ.ಸ್ವ.ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಈಗ ನಾವು ಸ್ವತಂತ್ರವಾಗಿ ಉಸಿರಾಡುತ್ತಿದ್ದರೆ ಅದು ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಗಳಿಂದಾಗಿ. ದೇಶಕ್ಕಾಗಿ ಮತ್ತೊಮ್ಮೆ ಹೋರಾಡುವ ಅಧ್ಭುತ ಕ್ಷಣ ತುರ್ತು  ಪರಿಸ್ಥಿತಿಯ ಕಾಲದ್ದಾಗಿತ್ತು ಎಂದರು.
ಇಂದಿರಾಗಾಂಧಿ ಈ ದೇಶದ ಸ್ವಾತಂತ್ರ್ಯವನ್ನೇ ಹಿಚುಕಿ ಬಿಟ್ಟಿದ್ದರು. ಇಂದಿರಾಗಾಂಧಿ ವಿರೊಧಿಗಳೆಂದು ಗೊತ್ತಾದರೆ ಜೈಲಿಗೆ ಎಳೆದೊಯ್ಯುತ್ತಿದ್ದರು. ನಾರಾಯಣ ನಾರಾಯಣ ಜಪ ಮಾಡಿದರೂ ಜಯಪ್ರಕಾಶ ನಾರಯಣ ಎನ್ನುತ್ತಿದ್ದಾರೆ ಎಂದು ಎಳೆದೊಯ್ಯುತ್ತಿದ್ದರು. ಬಂಟ್ವಾಳ ತಾಲೂಕಿನ ಅನೇಕ ಮಹನೀಯರು ಹಾಗೂ ಮಾತೆಯರು ಈ ಹೋರಾಟದಲ್ಲಿ ಬಾಗವಹಿಸಿದ್ದಾರೆ ಕೆಲವರು ನೇರವಾಗಿ ಹೋರಾಟದಲ್ಲಿ ಕಾನಿಸಿಕೊಂಡರೆ ಹಲವರು ಭೂಗತರಾಗಿ ಹೋರಾಟ ನಡೆಸಿದ್ದಾರೆ ಎಂದರು. ಇಂದಿರಾ ಅಧಿಕಾರ ಕಾಲದಲ್ಲಿ ಆರ್ ಎಸ್ ಎಸ್ ಏಕಾಂಗಿಯಾಗಿ ಎಲ್ಲರೂ ಕಾಂಗ್ರೆಸ್ನ ಹಿಂದೆ ಇದ್ದರು. ತುರ್ತು  ಪರಿಸ್ಥಿತಿ ಕಾಲದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಎಲ್ಲರೂ ಆರ್ ಎಸ್ಎಸ್ ಹಿಂದೆ ಇದ್ದರು ಎಂದು ತಿಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ರಾ.ಸ್ವ. ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
1975-77ರ ನಡುವಿನ ತುರ್ತು ಪರಿಸ್ಥಿತಿಯ ವಿವಿಧ ಘಟನಾವಳಿಗಳ ಸಚಿತ್ರವಾಗಿರುವಂತಹ ಭುಗಿಲು ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ತುರ್ತು ಪರಿಸ್ಥಿತಿಯ ಸಂದರ್ಭ ನೆನಪು ಮಾಡುವಂತಹ ಹೇಳಿಕೆ, ಚಿತ್ರಗಳು ಮತ್ತು ಪತ್ರಿಕೆಗಳನ್ನೊಳಗೊಂಡ ಘಟನಾವಳಿಗಳ ಪ್ರದರ್ಶ ನಿಯ ಉದ್ಘಾಟನೆಯನ್ನು ತುರ್ತು ಪರಿಸ್ಥಿತಿಯ ಮೀಸಾಬಂಧಿ ಹೋರಾಟಗಾರ್ತಿ ಸುಮತಿ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ವಸಂತಮಾಧವ ಸ್ವಾಗತಿಸಿದರು. ಹರೀಶ್ ವಂದಿಸಿದರು. ಯತಿರಾಜ್, ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.
ವಿಚಾರ ಸಂಕಿರಣ ದ ಅಂಗವಾಗಿ ತುರ್ತು ಪರಿಸ್ಥಿತಿಯ ಸಂದರ್ಭದ ಅಪರೂಪದ ಹಿನ್ನೆಲೆ, ಭಾವಚಿತ್ರ ಇನ್ನಿತರ ಮಾಹಿತಿಗಳ ಪ್ರದರ್ಶನ ಹಾಗೂ ಅಣಕು ಜೈಲಿನ ಮೂಲಕವೇ ಸಭಾಂಗಣಕ್ಕೆ ಪ್ರವೇಶ ಕಲ್ಪಿಸಲಾಗಿತ್ತು.
ಮಂಗಳೂರು, ಉಡುಪಿ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಸಂದರ್ಭ ಸತ್ಯಾಗ್ರಹದಲ್ಲಿ ಭಾಗವಹಿಸಿದ, ಮೀಸಾ ಬಂದಿಗಳಾಗಿದ್ದ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *