ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನ ಸಜಿಪ-ಮುನ್ನೂರು ಇದರ ಜೀರ್ಣೋದ್ಧಾರ ಅಂಗವಾಗಿ ಅಂದಾಜು ಒಂದು ಕೋಟಿ ವೆಚ್ಚದಲ್ಲಿ ನೂತವಾಗಿ ಶಿಲಾಮಯ ಮತ್ತು ಸುತ್ತುಪೌಳಿ ನಿರ್ಮಾಣಗೊಳ್ಳುತ್ತಿದ್ದು ಗ್ರಾಮಸ್ಥರ ಪೂರ್ಣ ಸಹಕಾರ ಪಡೆಯುವ ದೃಷ್ಟಿಯಿಂದ ಸೆ.13 ರಂದು ದೈವಾಭಿಮಾನಿಗಳ ಸಮಾಲೋಚನಾ ಸಭೆಯನ್ನು ದೈವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿತ್ತು.
DISC-2015ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ ವಹಿಸಿ ಗ್ರಾಮಸ್ಥರು ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ತನು-ಮನ-ಧನದ ಸಹಕಾರ ಯಾವ ರೀತಿ ನೀಡಬಹುದು ಎಂಬುದನ್ನು ಸಾದ್ಗಂತವಾಗಿ ವಿವರಿಸಿದರು. ಸಭೆಯನ್ನುದ್ದೇಶಿಸಿ ಸಮಿತಿ ಪ್ರಮುಖರಾದ ಎಂ.ಸುಬ್ರಹ್ಮಣ್ಯ ಭಟ್ , ದಿನೇಶ್ ಭಂಡಾರಿ , ಎನ್.ಕೆ.ಶಿವ ಮಾತನಾಡಿದರು. ಪದಾಧಿಕಾರಿಗಳಾದ ಎಂ.ಸೂರ್ಯನಾರಾಯಣ ಭಟ್, ಶಿವರಾಮ ಬ್ರಾಸಿತ್ತಾಯ , ಮನೋಜ್ ಆಳ್ವ , ಪರಮೇಶ್ವರ ಎಂ., ಗೋಪಾಲಕೃಷ್ಣ ಆಚಾರ್ಯ, ಚಂದ್ರಶೇಖರ ಗಟ್ಟಿ , ನರೇಂದ್ರ ಆಳ್ವ , ಗಂಗಾಧರ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *