ಬಂಟ್ವಾಳ: ವಿದ್ಯಾರ್ಥಿ ಜೀವನದ ಸಮಯವು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಪ್ರಮುಖ ಹಂತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ತಮಗೆ ದೊರೆಯುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಕೇಂದ್ರಿತ ಪರಿಸರವು ಸ್ಪರ್ಧಾತ್ಮಕವಾದುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಒತ್ತಡ ವರ್ತಮಾನದ್ದಾಗಿದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾಸಂಸ್ಥೆಗಳಲ್ಲಿ ನಿರಂತರವಾಗಿ ನಡೆಯಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ನುಡಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ನಡೆದ ವಿಕಾಸ್-2015 ಅಂತರ್ ಕಾಲೇಜು ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸ್ಪರ್ಧಾ ವಿಜೇತರ ವಿವರ:
ಕನ್ನಡ ಭಾಷಣ ಸ್ಪರ್ಧೆ : ಪ್ರಥಮ : ಕಾರ್ತಿಕ್ ಎಸ್. ವಿವೇಕಾನಂದ ಪಿ.ಯು.ಕಾಲೇಜ್ ಪುತ್ತೂರು
ದ್ವಿತೀಯ : ಸತ್ಯಶ್ಯಾಮ , ಶ್ರೀ ರಾಮ ಪಿ.ಯು. ಕಾಲೇಜ್, ಕಲ್ಲಡ್ಕ
ಇಂಗ್ಲಿಷ್ ಭಾಷಣ ಸ್ಪರ್ಧೆ : ಪ್ರಥಮ : ಸಮ್ಯಕ್, ಎಸ್.ಡಿ.ಎಮ್. ಪಿ.ಯು ಕಾಲೇಜ್, ಉಜಿರೆ
ದ್ವಿತೀಯ : ಅನ್ವಿತಾ ಡಿ.ಕೆ., ಜೈನ್ ಪಿ.ಯು.ಕಾಲೇಜ್, ಮೂಡಬಿದ್ರಿ
ಫಲೀಲಾ ಸಿಮಿತ್, ಮೆಲ್ಕಾರ್ ಮಹಿಳಾ ಕಾಲೇಜು, ಮೆಲ್ಕಾರ್
ಆಶುಭಾಷಣ ಸ್ಪರ್ಧೆ : ಪ್ರಥಮ : ಎಮ್. ವೈಷ್ಣವಿ ಪೈ, ಕರ್ನಾಟಕ ಪಿ.ಯು. ಕಾಲೇಜ್, ಮಾಣಿ
ದ್ವಿತೀಯ : ಫಲೀಲಾ ಸಿಮಿತ್, ಮೆಲ್ಕಾರ್ ಮಹಿಳಾ ಕಾಲೇಜು, ಮೆಲ್ಕಾರ್
ಜನಪದ ಗೀತೆ : ಪ್ರಥಮ : ಚಿನ್ಮಯ, ಎಸ್.ವಿ.ಎಸ್. ಪಿಯು ಕಾಲೇಜ್ ಬಂಟ್ವಾಳ
ದ್ವಿತೀಯ : ಕ್ಷಮಾ ಭಟ್, ನೆಹರು ಮೆಮೊರಿಯಲ್ ಪಿಯು ಕಾಲೇಜ್ ಬಂಟ್ವಾಳ
ಪ್ರಹಸನ ಸ್ಪರ್ಧೆ : ಪ್ರಥಮ : ಎಸ್.ಡಿ.ಎಮ್. ಪಿ.ಯು. ಕಾಲೇಜ್ ಉಜಿರೆ
ದ್ವಿತೀಯ : ಶ್ರೀ ರಾಮ ಪಿಯು ಕಾಲೇಜ್, ಕಲ್ಲಡ್ಕ
ರಸಪ್ರಶ್ನೆ ಸ್ಪರ್ಧೆ : ಪ್ರಥಮ : ಎಸ್.ಡಿ.ಎಮ್. ಪಿಯು ಕಾಲೇಜ್ ಉಜಿರೆ
ದ್ವಿತೀಯ : ವಿವೇಕಾನಂದ ಪಿಯು ಕಾಲೇಜ್, ಪುತ್ತೂರು
ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸ್ಪರ್ಧೆಗಳ ಸಂಯೋಜಕ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು. ವಿಕಾಸ್ 2015ರ ವಿಜೇತರ ಪಟ್ಟಿಯನ್ನು ಉಪನ್ಯಾಸಕಿ ಶಾಲಿನಿ ಬಿ. ಪ್ರಸ್ತುತ ಪಡಿಸಿದರು. ಉಪನ್ಯಾಸಕಿ ಭಾರತಿ ಪಿ. ಸ್ವಾಗತಿಸಿ, ಉಪನ್ಯಾಸಕ ಪ್ರದೀಪ್ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
