ಬಂಟ್ವಾಳ: ಕರಾವಳಿ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಉಳಿಸಿ ಹೋರಾಟದ ಅಂಗವಾಗಿ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಆಶ್ರಯದಲ್ಲಿ ಸೆ. 15ರಂದು ತಾಲೂಕು ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆಯಲ್ಲಿ ನಮ್ಮ ಜೊತೆ ಈ ಕೆಳಗಿನ ಆರು ಸಂಘಟನೆಗಳ ಸದಸ್ಯರು ಸಕ್ರಿಯ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಕಾರ್ಯಕಾರಿ ಸದಸ್ಯ ಬಿ.ಎಂ. ಪ್ರಭಾಕರ ದೈವಗುಡ್ಡೆ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕು ರಿಕ್ಷಾ ಚಾಲಕರ ಸಂಘ, ಬಿಎಂಎಸ್, ರಿಕ್ಷಾ ಚಾಲಕರ ಡ್ರೈವರ್ಸ್ ಅಸೋಸಿಯೇಶನ್, ಬಂಟ್ವಾಳ, ಬಂಟ್ವಾಳ ತಾಲೂಕು ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಚಾಲಕರ ಸಂಘ, ಬಿ.ಸಿ.ರೋಡ್, ಬಂಟ್ವಾಳ, ಗ್ಯಾರೇಜ್ ಮಾಲಕರ ಸಂಘ ಬಂಟ್ವಾಳ ತಾಲೂಕು, ಎಐಟಿಯುಸಿ ಬಂಟ್ವಾಳ ತಾಲೂಕು. ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ ಬಿ.ಸಿ.ರೋಡ್, ಬಂಟ್ವಾಳ. ಹಸಿರು ಸೇನೆ, ಇದಲ್ಲದೆ ತಾಲೂಕಿನ ರೈತ ಸಂಘಟನೆಗಳು ಸಹಕರಿಸಿ ಬೆಂಬಲಿಸುವುದಾಗಿ ತಿಳಿಸಿದ್ದು ಸಾರ್ವಜನಿಕರು ಬೆಂಬಲ ಪ್ರೋತ್ಸಾಹ ನೀಡಲು ವಿನಂತಿಸುವುದಾಗಿ ಹೇಳಿದ್ದಾರೆ.
ಕಾರ್ಯಕ್ರಮದಂತೆ ಸೆ. 15ರಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡ್ ಪೊಳಲಿ ದ್ವಾರದಿಂದ ಮೆರವಣಿಗೆ ಹೊರಟು ಹೆದ್ದಾರಿಯಲ್ಲಿ ಸಂಚರಿಸಿ ನೇರವಾಗಿ ತಾಲೂಕು ಕಛೇರಿಗೆ ಮುತ್ತಿಗೆ ನಡೆಸಲಾಗುತ್ತದೆ ಎಂದಿದ್ದಾರೆ.
