ಬಂಟ್ವಾಳ: ವಿಟ್ಲ ಜೆಸಿಐ ಸಪ್ತಾಹದ ಅಂಗವಾಗಿ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಥಿಗಳಿಗೆ `ವಿದ್ಯಾರ್ಥಿಗಳಲ್ಲಿ ಗುರಿ ನಿರ್ಧಾರ’ ಎಂಬ ತರಬೇತಿ ಕಾರ್ಯಕ್ರಮವು 10-09-2015 ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲ ಆದರ್ಶ ಚೊಕ್ಕಾಡಿಯವರು ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಯಾಗಿ ಭಾಗವಹಿಸಿದ ಪುತ್ತೂರು ಜೆಸಿಐನ ರಾಷ್ಟ್ರೀಯ ತರಬೇತುದಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಲಹೆಗಾರ ವೇಣುಗೋಪಾಲ ಎಸ್ ಜೆ ಇವರು ತರಬೇತಿ ನೀಡಿದರು. ಜೇಸಿ ಲೂವಿಸ್ ಮಸ್ಕರೇನಸ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಜೆಸಿ ಅಣ್ಣಪ್ಪ ಸಾಸ್ತಾನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜೆಸಿಐ ಸಪ್ತಾಹದ ನಿರ್ದೇಶಕ ಬಾಬು ಕೊಪ್ಪಳ ವಂದಿಸಿದರು.
