ಬಂಟ್ವಾಳ : ತಾಲೂಕಿನ ಯುವ ಸಂಗಮ ಮೆಲ್ಕಾರ್ ಇದರ ವತಿಯಿಂದ ಪಾಣೆಮಂಗಳೂರಿನಲ್ಲಿ 10 ವರ್ಷಗಳಿಂದ ರುದ್ರ ಭೂಮಿ ಹಾಗೂ ಊರ ಪರಿಸರದಲ್ಲಿ ಸ್ವ- ಇಚ್ಛೆಯಿಂದ 200ಕ್ಕೂ ಅ„ಕ ಶವ ದಹನ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ರಮೇಶ ಪೂಜಾರಿ ಬೋಳಂಗಡಿ ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ನರಹರಿ ಪರ್ವತದ ಆಡಳಿತ ಮೊಕ್ತೇಸರ ಡಾ|ಪ್ರಶಾಂತ್ ಮಾರ್ಲ, ಮುಗುಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಶಂಕರ ಬಾಸ್ರಿತ್ತಾಯ, ಚೇತನ್ ಕ್ಲಿನಿಕ್ನ ಡಾ|ಜಯಪ್ರಕಾಶ್, ಯುವ ಸಂಗಮದ ಸ್ಥಾಪಕಾಧ್ಯಕ್ಷ ಸತೀಶ ಎಲಬೆ, ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ವಿಠಲ ಶೆಣೈ , ಖಜಾಂಚಿ ಕರುಣಾಕರ, ಎಂ.ಎನ್.ಕುಮಾರ್, ಕೃಷ್ಣ ನಾೈಕ್, ಜ್ಞಾನೇಶ್ವರ ಪ್ರಭು, ಆರ್.ಕೆ.ಈಶ್ವರ ಮತ್ತಿತರರು ಉಪಸ್ಥಿತರಿದ್ದರು.
