ಬಂಟ್ವಾಳ : ಪದವಿಪೂರ್ವ ಶಿಕ್ಷಣ ಇಲಾಖೆ, ಮೆಲ್ಕಾರ್ ಮಹಿಳಾ ಪ.ಪೂ.ಕಾಲೇಜು, ಪ್ರಾಂಶುಪಾಲ ದಂಘ ಹಾಗೂ ದ.ಕ.ಜಿಲ್ಲಾ ರಸಾಯನ ಶಾಸ್ತ್ರ ಉಪನ್ಯಾಸಕರುಗಳ ಸಂಘದ ಆಶ್ರಯದಲ್ಲಿ ಪದವಿ ಪೂರ್ವ ತರಗತಿಗಳ”ರಸಾಯನ ಶಾಸ್ತ್ರ ಬೋಧನೆಯಲ್ಲಿ ಶೈಕ್ಷಣಿಕ ಸವಾಲುಗಳು” ಎಂಬ ವಿಷಯದ ಕುರಿತು ರಸಾಯನ ಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವು ಸೆ.14 ರಂದು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹನಿರ್ದೇಶಕ ಜಗಜೀವನದಾಸ್ ಭಂಡಾರಿ ಕಾರ್ಯಾಗಾರ ಉದ್ಘಾಟಿಸುವರು. ಇಲಾಖಾ ದ.ಕ.ಜಿಲ್ಲಾ ಉಪನಿರ್ದೇಶಕ ಕೆ.ಆರ್.ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನ ಸ್ಥಾಪಕಾಧ್ಯಕ್ಷ ಎಸ್.ಎಂ.ರಶೀದ್, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಸರಸ್ವತಿ, ಜಿಲ್ಲಾ ರಸಾಯನ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕರುಗಳಾದ ಡಾ.ಜಿ.ಬಿ.ಈರೇಗೌಡ ಬೆಂಗಳೂರು, ಕೆ.ಸದಾಶಿವ ಶಿರ್ವ ಮತ್ತು ಸುರೇಶ್ ಎನ್.ಕೆ. ಮಂಗಳೂರ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಘವಹಿಸುವರು ಎಂದು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಕೆ.ಅಬ್ದುಲ್ ಲತೀಫ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *