ಬಂಟ್ವಾಳ: ಕರ್ನಾಟಕ ರಾಜ್ಯ ಬಿಜೆಪಿ ವತಿಯಿಂದ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆಯ ಅಂಗವಾಗಿ ಬಿ.ಸಿ.ರೋಡಿನ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ದ ಪಕ್ಕದ ವಿಶಾಲ ಮೈದಾನದಲ್ಲಿ ಸೆ.11 ರಂದು ನಡೆಯಿರುವ ಬೃಹತ್ ರೈತರ ಸಮಾವೇಶ ಕ್ಕೆ ಪೂರ್ವಭಾವಿಯಾಗಿ ನಡೆಯುವ ವ್ಯವಸ್ಥೆಯ ಬಗ್ಗೆ ಸುನಿಲ್ ಕುಮಾರ್ ಬೇಟಿ ನೀಡಿ ವೀಕ್ಷಣೆ ನಡಸಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಜಿ.ಆನಂದ, ರುಕ್ಮಯ ಪೂಜಾರಿ, ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ವಿಧಾನಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಪಕ್ಷದ ಪ್ರಮುಖರಾದ ಪ್ರಸಾದ್ ಕುಮಾರ್ ಬೆಳ್ತಂಗಡಿ, ಜೇಷ್ಟ ಪಡಿವಾಲ, ವಿಕಾಶ್ ಪುತ್ತೂರು, ಸಂಜೀವ ಮಠಂದೂರು, ಕ್ಯಾಪ್ಟನ್ ಬೃಜೇಶ್ ಚೌಟ, ರೋನಾಲ್ಡ್ ಡಿ.ಸೋಜ, ದೇವಪ್ಪ ಪೂಜಾರಿ ,ಚೆನ್ನಪ್ಪ ಕೋಟ್ಯಾನ್ ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ದಿನೇಶ್ ಭಂಡಾರಿ, ದಿನೇಶ್ ಅಮ್ಟೂರು ಮೊದಲಾದವರಿದ್ದರು.


