ಕಾಸರಗೋಡು: ಇಲ್ಲಿನ ಕೂಡ್ಲು ಸೇವಾ ಸಹಕಾರಿ ಬ್ಯಾಂಕಿ ನಿಂದ ನಗ-ನಗದು ದರೋಡೆಗೈದ ಪ್ರಕರಣದಲ್ಲಿ  ಒರ್ವನನ್ನು ಬಂಧಿಸ ಲಾಗಿದ್ದು, ನಾಲ್ವರ ಗುರುತಿಸಲಾಗಿದೆ.
unnamed (9)
ಕಳೆದ ಸೋಮವಾರ ಮಧ್ಯಾಹ್ನ ದರೋಡೆಕೋರರು ಬ್ಯಾಂಕ್ ಸಿಬ್ಬಂದಿಯನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದರು.
ದರೋಡೆಕೋರರು ಪರಾರಿಯಾಗುವ ಸಮಯದಲ್ಲಿ ಅವರನ್ನು ನೋಡಿದ್ದ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯಂತೆ ಓರ್ವ ಆರೋಪಿಯ ರೇಖಾಚಿತ್ರವನ್ನು ತಯಾರಿಸಿ ಬಿಡುಗಡೆಗೊಳಿಸಲಾಗಿದೆ. ಆರೋಪಿಗಳಿಗೆ ಗಾಂಜಾ ಮಾರಾಟ ಜಾಲದ ಜೊತೆಯೂ ಸಂಪರ್ಕವಿದೆ ಎಂದು ತಿಳಿದು ಬಂದಿದೆ. ಆರೋಪಿಗಳು ದರೋಡೆ ನಡೆಸಿ ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ವೇಳೆ ಕೈಯಿಂದ ಜಾರಿಬಿದ್ದ ಚಿನ್ನದ ಸರವನ್ನು ಸ್ಥಳೀಯರೊಬ್ಬರು ಹೆಕ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *