ಬಂಟ್ವಾಳ: ಕೇರಳದಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನ ಸಿಪಿಐ(ಎಂ) ಕಾರ್ಯಕರ್ತರು ಬ್ರಹ್ಮಶ್ರೀ ನಾರಾಯಣ ಗುರುವನ್ನು ಶಿಲುಬೆಗೇರಿಸುವ ರೀತಿಯಲ್ಲಿ ಚಿತ್ರಿಸಿರುವುದನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಬಂಟ್ವಾಳ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ಸಿಪಿಐ(ಎಂ) ಪಕ್ಷ ಜನತೆಯಲ್ಲಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹಿಸಿದ್ದು, ಕ್ಷಮೆಯಾಚಿಸದಿದ್ದರೆ ಜಿಲ್ಲಾ ಬಂದ್‍ಗೆ ಕರೆ ನೀಡುವುದಾಗಿ ಮನವಿಯಲ್ಲಿ ಎಚ್ಚರಿಸಿದೆ. ಮನವಿ ಕೊಡುವ ಸಂದರ್ಭ ಬಿಜೆಪಿ ಹಲವು ಮುಖಂಡರು ಉಪಸ್ಥಿತರಿದ್ದರು.

