ಬಂಟ್ವಾಳ: ಮಂಗಳವಾರ ರಾತ್ರಿ ಬಂಟ್ವಾಳ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಸ್ತುಶಃ ಜಾರಿಗೆ ಬಂದಂತ್ತಿತ್ತು ! ವಿಶೇಷವೆಂದರೆ ವಿದ್ಯುತ್ ಲೈನ್ ಪ್ವಾಲ್ಟ್ ಅದರೂ ರಿಪೇರಿ ಕೂಡ ಮಾಡದೆ ನಿಯತ್ತಾಗಿ ಮೆಸ್ಕಾಂಗೆ ವಿದ್ಯುತ್ ಬಿಲ್ಲು ಪಾವತಿಸುವ ಬಳಕೆದಾರರನ್ನು ಕಗ್ಗತ್ತಲ್ಲಲ್ಲಿಯೇ ಕಾಲಕಳೆಸುವುದು ಇದರಲ್ಲಿ ಸೇರಿದೆಯೇ ಎಂಬ ಅನುಮಾನ ಗ್ರಾಹಕರಲ್ಲಿ ಕಾಡಿದೆ.
ಮಧ್ಯೆ ರಾತ್ರಿ ಸುಮಾರು 1ರಿಂದ 1.30ರ ಮಧ್ಯೆ ಕಡಿತಗೊಂಡ ಅನಧಿಕೃತ ಪವರ್ ಕಟ್ ಪ್ರತಿನಿತ್ಯ ಬೆಳಿಗ್ಗೆ 7ಗಂಟೆ ಹೊತ್ತಿಗೆ ಆಗುವ ಅಧಿಕೃತ ಪವರ್ ಕಟ್ ಅವಧಿ ಮುಗಿಯುವ ವರೆಗೂ ಅಂದರೆ 9 ಗಂಟೆಯ ತನಕ ಮುಂದುವರಿದಿದ್ದು ಬಂಟ್ವಾಳ ನಗರ, ಬಿ.ಸಿರೋಡಿನ ಕೈಕುಂಜೆ, ನರಿಕೊಂಬು ಮೊದಲಾದ ಪರಿಸರದಲ್ಲಿ ಮಂಗಳವಾರ ಮಧ್ಯೆರಾತ್ರಿಯಿಂದ ಬೆಳಿಗ್ಗಿನವರೆಗೆ ವಿದ್ಯುತ್ ಕಡಿತ ಉಂಟಾಗಿದ್ದರೆ ಕೆಳ ಭಾಗದಲ್ಲಿ ವಿದ್ಯುತ್ ಕಣ್ಮುಚ್ಚಲೆಯಾಡುತ್ತಿತ್ತು.
ಮಧ್ಯೆ ರಾತ್ರಿ ವೇಳೆ ಕೊಂಚ ಮಳೆ ಸುರಿದಿತ್ತಾದರೂ ಹೇಳಿಕೊಳ್ಳುವ ರೀತಿಯಲ್ಲಿ ದಾರಕಾರ ಮಳೆ ಇರಲಿಲ್ಲ. ಗುಡುಗು, ಮಿಂಚು ಕೂಡ ಇರಲಿಲ್ಲ. ರಾತ್ರಿ ಪಾಳೆಯದಲ್ಲಿ ಲೈನ್ ಮ್ಯಾನ್ಗಳು ಕರ್ತವ್ಯದಲ್ಲಿದರೂ ಲೈನ್ ಫಾಲ್ಟ್ ಪತ್ತೆಹಚ್ಚಿ ದುರಸ್ಥಿಪಡಿಸಲು ತೊಂದರೆ ಇಲ್ಲದಿದ್ದರೂ ಮೆಸ್ಕಾಂ ಅಧಿಕಾರಿಗಳು ಪವರ್ ಕಟ್ಟಿನ ಹೆಸರಿನಲ್ಲಿ ಗ್ರಾಹಕರನ್ನು ವಿದ್ಯುತ್ ಬಳಕೆಯಿಂದ ವಂಚಿತರನ್ನಾಗಿಸಿದ್ದರೆಂಬ ಆಕ್ರೋಶ ವಿದ್ಯುತ್ ಬಳಕೆದಾರರಿಂದ ವ್ಯಕ್ತವಾಗಿದೆ.
ಪೋನ್ ಎತ್ತುವವರೇ ಇಲ್ಲ…..
ವಿದ್ಯುತ್ ಕಡಿತಗೊಂಡಕ್ಷಣ ಬಳಕೆದಾರರು ಮಾಹಿತಿಗಾಗಿ ಬ್ರಹ್ಮರಕೊಟ್ಲುವಿನಲ್ಲಿರುವ ವಿದ್ಯುತ್ ಪೂರೈಕ ಕೇಂದ್ರಕ್ಕೆ ಕರೆಮಾಡುವುದು ಸಾಮಾನ್ಯವಾಗಿದೆ. ಮಂಗಳವಾರ ರಾತ್ರಿ ದೀರ್ಘ ಹೊತ್ತು ವಿದ್ಯುತ್ ಕಡಿತ ಉಂಟಾದುದರಿಂದ ಕೆಲ ಗ್ರಾಹಕರು ಇಲ್ಲಿಗೆ ಕರೆ ಮಾಡಿದಾಗ ಲೈನ್ ಫಾಲ್ಟ್ಯಾಗಿದೆ ಎಂಬ ಮಾಮೂಲಿ ಉತ್ತರ ಸಿಕ್ಕಿತ್ತು. ಕೊನೆಗೆ ಬೆಳಿಗ್ಗೆನವರೆಗೂ ವಿದ್ಯುತ್ ಉರಿಯದಿದ್ದಾಗ ಇಲ್ಲಿಗೆ ಪೋನಾಯಿಸಿದರೆ ಉತ್ತರಿಸುವ ಸೌಜನ್ಯವನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ತೋರಿಸಲಿಲ್ಲ ಎಂಬ ಆರೋಪ ಗ್ರಾಹಕರಿಂದ ಕೇಳಿ ಬಂದಿದೆ.
ಆಗೆಯೇ ಇಲಾಖೆಯ ಜೆ.ಇ, ಎ.ಇ ಯವರು ಮೊಬೈಲ್ ಸ್ವೀಚ್ ಆಫ್ ಮಾಡಿ ತಮ್ಮ ನಿದ್ರೆಗೆ ಭಂಗ ಬಾರದಂತೆ ಹಾಯಾಗಿ ಮಲಗಿದ್ದರೆ ಇತ ವಿದ್ಯುತ್ ಬಳಕೆದಾರರು ಸೊಳ್ಳೆ ಓಡಿಸಿಕೊಂಡು ಜಾಗರಣೆ ಕೂರಬೇಕಾಯಿತು. ವಿದ್ಯುತ್ ಕೊರತೆಯಿಂದಾಗಿ ಹಗಲು ಹೊತ್ತು ಸರಕಾರದ ಅಧಿಕೃತ ಪವರ್ ಕಟ್ಕ್ಕಿಂತ ಹೆಚ್ಚಾಗಿಯೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದನ್ನು ಗ್ರಾಹಕರು ಯಾರು ಪ್ರಶ್ನಿಸುತ್ತಿಲ್ಲ. ಆದರೆ ಲೈನ್ ಫಾಲ್ಟ್ ನೆಪದಲ್ಲಿ ಇಡೀ ರಾತ್ರಿ ಅನಧಿಕೃತ ಪವರ್ ಕಟ್ ಮಾಡುವುದು ಎಷ್ಟು ಸರಿ ಎಂದು ಗ್ರಾಹಕರ ಪ್ರಶ್ನೆ ?. ಇದನ್ನು ಕೇಳಬೇಕಾದ ಜನಪ್ರತಿನಿಧಿಗಳು ಸುಮ್ಮನೆ ಇದ್ದಾರೆ.
ಲೈನ್ ಕಟ್…………….
ಮಂಗಳವಾರ ಮಧ್ಯ ರಾತ್ರಿ ಬಿ.ಸಿರೋಡಿನ ಬಸ್ಸು ನಿಲ್ದಾಣದ ಬಳಿ ಇರುವ ಹೆಚ್.ಟಿ ವಿದ್ಯುತ್ ತಂತಿ ತುಂಡರಿಸಲ್ಪಟಿದ್ದರಿಂದ ವಿದ್ಯುತ್ ಕಡಿತ ಉಂಟಾಗಿತ್ತು, ರಾತ್ರಿ ವೇಳೆ ಇದರ ದುರಸ್ಥಿಗೆ ಸಾಧ್ಯವಾಗಿರಲಿಲ್ಲ, ಬೆಳಗ್ಗಿನ ಹೊತ್ತು ಇದನ್ನು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಜೆ.ಇ ನಾರಾಯಣ್ ಭಟ್ ತಿಳಿಸಿದ್ದಾರೆ.

